ಸಿಂಗಾಪುರ : ಒಂದೇ ದಿನ 59 ಭಾರತೀಯರಿಗೆ ಸೋಂಕು..!

ಸಿಂಗಪೂರ್ :

      ಭಾರತ ಬಿಟ್ಟು ವಿದೇಶಿದಲ್ಲಿ ಸಿಲುಕಿಕೊಂಡಿರುವ ಭಾರತೀಯರ ಕಥೆ ಏನು ಎಂಬುದಕ್ಕೆ ಸರಿಯಾದ ಅಂಕಿಅಂಶ ಇಲ್ಲ. ಇದೀಗ, ಸಿಂದಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಂದೇ ದಿನದಲ್ಲಿ ಸಿಂಗಾಪುರದಲ್ಲಿ 233 ಜನರಿಗೆ ಕೊವಿಡ್ ಸೋಂಕು ದೃಢವಾಗಿದ್ದು, ಅದರಲ್ಲಿ 59 ಜನರು ಭಾರತೀಯರು ಎಂದು ವರದಿಯಾಗಿದೆ.

     233 ಜನರ ಪೈಕಿ 51 ಜನರು ಒಂದೇ ಕಡೆ ಭಾಗವಹಿಸಿದ್ದವರು. ಉಳಿದ 167 ಜನರು ಯಾರ ಸಂಪರ್ಕದಲ್ಲಿದ್ದರು, ಅವರಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ,ಇದುವರೆಗೂ ಸಿಂಗಾಪುರದಲ್ಲಿ ಒಟ್ಟು 2532 ಜನರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 8 ಜನರು ಮೃತಪಟ್ಟಿದ್ದಾರೆ. 560 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಂದೇ ದಿನ 59 ಭಾರತೀಯರಿಗೆ ಸೋಂಕು ತಗುಲಿದ್ದು, ಸಿಂಗಾಪುರದಲ್ಲಿ ಒಟ್ಟು ಸೋಂಕಿತ ಭಾರತೀಯರ ಸಂಖ್ಯೆ 81ಕ್ಕೆ ಏರಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap