ಟೆಹರಾನ್:
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾನಿನ ಸೆರೆಮನೆಗಳಲ್ಲಿರುವ 70 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿರುವುದಾಗಿ ಇರಾನ್ ಸೋಮವಾರ ತಿಳಿಸಿದೆ.ನಿರ್ದಿಷ್ಟ ಅವಧಿಯ ಬಳಿಕ ಇವರು ಜೈಲುಗಳಿಗೆ ಮರಳಬೇಕಾಗಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಕೊರೊನಾ ಸೋಂಕು ಜೈಲುಗಳಲ್ಲಿ ಹರಡಿದಲ್ಲಿ ಪರಿಸ್ಥಿತಿ ನಿಯಂತ್ರಣ ಕಷ್ಟಕರವಾಗುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಪ್ರಕಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ