ಕಠ್ಮಂಡು:

ನೆರೆಯ ನೇಪಾಳದಲ್ಲಿ ಭಾರೀ ಪ್ರಮಾಣದ ಹಿಮಕುಸಿತ ಉಂಟಾಗಿದ್ದು ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹಿಮಸಮಾಧಿಯಾದ 9 ಮಂದಿಯ ಪೈಕಿ 5 ಮಂದಿ ದಕ್ಷಿಣ ಕೊರಿಯಾ ಪ್ರಜೆಗಳು, ಉಳಿದವರು ಅವರ ಸಹಾಯಕ್ಕೆ ನಿಯೋಜನೆ ಗೊಂಡಿದ್ದ ನೇಪಾಳ ಸಿಬ್ಬಂದಿ ಎಂದು ತಿಳಿಸಲಾಗಿದೆ ಮತ್ತು ಮೃತರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.








