ವಾಷಿಂಗ್ಟನ್:
ಜಾಗತಿಕ ಮಟ್ಟದಲ್ಲಿ ಹಿರಿಯಣ್ಣ ಎಂದೇ ಹೆಸರು ಮಾಡಿರುವ ಅಮೆರಿಕ ಟ್ರಂಪ್ ಸರ್ಕಾರ ಮಾಡಿರುವ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಹೆಚ್-1ಬಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದ ಅನೇಕ ಮಂದಿಗೆ ವೀಸಾ ಮಂಜೂರಾಗಿಲ್ಲ.
ಇನ್ನೂ ಭಾರತೀಯ ರಾಯಭಾರ ಕಚೇರಿ ಅಂಕಿ ಅಂಶಗಳ ಪ್ರಕಾರ 2015ರಲ್ಲಿ ಶೇಕಡಾ 6ರಷ್ಟು ಮಂದಿಗೆ ಹೆಚ್-1ಬಿ ವೀಸಾ ನಿರಾಕರಿಸಲಾಗಿತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಸಂಖ್ಯೆ ಶೇಕಡಾ 24ಕ್ಕೆ ಏರಿಕೆಯಾಗಿಗೆ ಎಂದು ಅಮೆರಿಕ ಹೇಳಿದೆ.ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ ಯುಎಸ್ ನಾಗರಿಕತ್ವ ಮತ್ತು ವಲಸೆ ಸೇವೆಗಳ ಕಾರ್ಯಲಯದ ಅಂಕಿಅಂಶಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಿದ್ದು . ಪ್ರಮುಖ ಭಾರತೀಯ ಐಟಿ ಕಂಪೆನಿಗಳಿಗೆ ಹೆಚ್-1ಬಿ ವೀಸಾ ನಿರಾಕರಣೆ ಸಂಖ್ಯೆ ಹೆಚ್ಚಾಗಿದ್ದು, ಡೊನಾಲ್ಡ್ ಟ್ರಂಪ್ ಸರ್ಕಾರ ಭಾರತೀಯ ಕಂಪೆನಿಗಳನ್ನು ಹೆಚ್ಚಾಗಿ ಗುರಿಯಾಗಿಟ್ಟುಕೊಂಡಿದೆ ಎಂಬ ಅಪವಾದಗಳಿಗೆ ಈ ಅಂಕಿಅಂಶ ಇಂಬು ನೀಡುತ್ತಿದೆ.
ಹೆಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಿದ ಅಮೆಜಾನ್, ಮೈಕ್ರೋಸಾಫ್ಟ್, ಇಂಟೆಲ್ ಮತ್ತು ಗೂಗಲ್ ಕಂಪೆನಿಗಳಿಗೆ ಸೇರಿದ ಉದ್ಯೋಗಿಗಳ ಪೈಕಿ ಶೇಕಡಾ 1ರಷ್ಟು ಮಾತ್ರ ವೀಸಾ ನಿರಾಕರಣೆ ಮಾಡಲಾಗಿತ್ತು. 2019ರಲ್ಲಿ ಅದೇ ಕಂಪೆನಿಗಳ ಉದ್ಯೋಗಿಗಳಿಗೆ ವೀಸಾ ನಿರಾಕರಣೆ ಪ್ರಮಾಣ ಶೇಕಡಾ 6, ಶೇಕಡಾ 8, ಶೇಕಡಾ 7 ಮತ್ತು ಶೇಕಡಾ 3ರಷ್ಟಾಗಿದೆ. ಆಪಲ್ ಕಂಪೆನಿಗೆ ವೀಸಾ ನೀಡಿಕೆ ನಿರಾಕರಣೆ ಪ್ರಮಾಣ 2015ರಲ್ಲಿ ಇದ್ದ ಶೇಕಡಾ 2ರಷ್ಟೇ ಪ್ರಮಾಣ ಈಗಲೂ ಅಷ್ಟೆ ಇದೆ.
ಟೆಕ್ ಮಹೀಂದ್ರಾ ಕಂಪೆನಿ ನೌಕರರಿಗೆ ಹೆಚ್-1ಬಿ ವೀಸಾ ನಿರಾಕರಣೆ ಪ್ರಮಾಣ ಶೇಕಡಾ 41ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಶೇಕಡಾ 34, ವಿಪ್ರೊ ಶೇಕಡಾ 53 ಮತ್ತು ಇನ್ಫೊಸಿಸ್ ನಲ್ಲಿ ಶೇಕಡಾ 45ರಷ್ಟು ಏರಿಕೆಯಾಗಿದೆ. ಅದೇ ಅಮೆರಿಕಾದ ಕಂಪೆನಿಗಳ ನೌಕರರಿಗೆ ಹೆಚ್ -1ಬಿ ವೀಸಾ ನೀಡಿಕೆ ಪ್ರಮಾಣ ಜಾಸ್ತಿಯಾಗಿದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
