ಪಾಕ್ ಗೆ ಖಡಕ್ ವಾರ್ನಿಂಗ್ ನೀಡಿದ ಅಮೇರಿಕ..!

ವಾಷಿಂಗ್ಟನ್:

      ಕೆಲ ತಿಂಗಳ ಹಿಂದೆ ಭಾರತದ ಮೇಲೆ ದಾಳಿಮಾಡಲು ಪಾಕಿಸ್ತಾನ ಅಮೇರಿಕ ತನಗೆ ನೀಡಿದ್ದ ಎಫ್ -16 ಯುದ್ಧ ವಿಮಾನಗಳನ್ನು ದುರ್ಬಳಕೆ ಮಾಡಿದೆ ಎಂದು ಅಮೇರಿಕ ಪಾಕ್ ಗೆ ವಾರ್ನಿಂಗ್ ನೀಡಿದೆ .

    ಭಾರತೀಯ ವಾಯುಪಡೆ ಹೊಡೆದುರುಳಿಸಿದ ನಂತರ ಅಮೆರಿಕಾ ಪಾಕಿಸ್ತಾನ ಸೈನ್ಯಕ್ಕೆ ತಾವು ನೀಡಿದ ಎಫ್ -16 ಅನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಆಗಸ್ಟ್‌ನಲ್ಲಿ ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥರನ್ನು ಅಮೆರಿಕಾ ಖಂಡಿಸಿದೆ ಎಂದು ಮಾದ್ಯಮವೊಂದು ವರದಿ ಮಡಿದೆ. , ಭಾರತೀಯ ವಾಯುಪಡೆಯು ಪಾಕಿಸ್ತಾನ ವಾಯುಪಡೆಯ ಎಫ್ -16 ಜೆಟ್ ಅನ್ನು ಹೊಡೆದುರುಳಿಸಿದ ಕೆಲ ತಿಂಗಳ ನಂತರ ಈ ವರದಿ ಹೊರಬಂದಿದ್ದೆ.

   ಅಂದಿನ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ಅಂಡರ್ ಸೆಕ್ರೆಟರಿ ಆಂಡ್ರಿಯಾ ಥಾಂಪ್ಸನ್ ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ  ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಅವರಿಗೆ ಆಗಸ್ಟ್ ತಿಂಗಳಲ್ಲಿ ಪತ್ರ ಬರೆದಿದ್ದಾರೆ ಎಂದು ಯುಎಸ್ ನ್ಯೂಸ್ ಪತ್ರಕೆ ವರದಿ ಮಾಡಿದೆ.

   ಫೆಬ್ರವರಿ 26 ರ ಬಾಲಕೋಟ್ ವೈಮಾನಿಕ ದಾಳಿಯ ನಂತರದ ಘಟನೆಗಳನ್ನು ನೇರವಾಗಿ ಉಲ್ಲೇಖಿಸಲಾಗಿರದಿದ್ದರೂ ಯುಎಸ್ ನ್ಯೂಸ್ ಮೂಲವೊಂದನ್ನು ಉಲ್ಲೇಖಿಸಿ, ಫೆಬ್ರವರಿಯಲ್ಲಿ ಕಾಶ್ಮೀರದ ಮೇಲೆ ಎಫ್ -16 ಬಳಸಿದ್ದಕ್ಕೆ ಅಮೆರಿಕಾ  ಕಳವಳ ವ್ಯಕ್ತಪಡಿಸಿದೆ ಎಂದು ವರದಿ ಹೇಳಿದೆ. “ಈ ವಿಮಾನದ ಹಾರಾಟ ರಾಷ್ಟ್ರದ ರಕ್ಷಣಾ ಉದ್ದೇಶಕ್ಕಾಗಿ ನಡೆದಿದೆ ಎಂಬುದನ್ನು ನಾವು ನಿಮ್ಮಿಂದ ಕೇಳಿದ್ದರೂ ಯುಎಸ್ ಸರ್ಕಾರವು ಎಫ್ -16 ಬಳಸಿದ ಉದ್ದೇಶದ ಬಗ್ಗೆ ಸಂಪೂರ್ಣ ಖಾತರಿ ಹೊಂದಿಲ್ಲ  ಹಾಗೂ ಇದು ಅಂತರಾಷ್ಟ್ರೀಯ ನಿಮಕ್ಕೆ ವಿರುದ್ಧವೆಂದು ಭಾವಿಸಿದೆ” ಪತ್ರದಲ್ಲಿ ವಿವರಿಸಿದೆ.

 

    ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಗುಂಪಿನ ಆತ್ಮಹತ್ಯಾ ಬಾಂಬರ್ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40 ಸಿಆರ್ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದಿದ್ದ. ಇದರ ನಂತರ ಫೆಬ್ರವರಿ 26 ರಂದು ಬಾಲಕೋಟ್‌ನಲ್ಲಿ ಜೆಎಂ ತರಬೇತಿ ಶಿಬಿರದ ವಿರುದ್ಧ ಭಾರತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

    ಮರುದಿನ, ಪಾಕಿಸ್ತಾನದ ವಾಯುಪಡೆಯು ಪ್ರತೀಕಾರದ ಸ್ವರೂಪದಲ್ಲಿ ಎಫ್ -16 ವಿಮಾನವನ್ನು ಭಾರತಕ್ಕೆ ನುಗ್ಗಿಸಲು ಯತ್ನಿಸಿದಾಗ  ಮಿಗ್ -21 ವಿಮಾನ ಬಳಸಿ ಭಾರತೀಯ ವಾಯುಪಡೆ ಅದನ್ನು ಹೊಡೆದುರುಳಿಸಿದೆ. ಆದರೆ ಆ ವೇಳೆ ಮಿಗ್ ಚಲಾಯಿಸುತ್ತಿದ್ದ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಫಾಕ್ ಸೇನೆ ಬಂಧಿಸಿತ್ತು. ಆ ಬಳಿಕ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಸುಮಾರು ಎರಡು ದಿನಗಳ ಬಳಿಕ ಬಿಡುಗಡೆ ಮಾಡಲಾಗಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link