ರಾಸಾಯನಿಕ ಘಟಕದಲ್ಲಿ ಸ್ಪೋಟ : 22 ಮಂದಿ ಸಾವು…!!!!

ಬೀಜಿಂಗ್:
           ಬೀಜಿಂಗ್ ನ ಪ್ರಸಿದ್ಧ ರಾಸಾಯನಿಕ ಘಟಕದಲ್ಲಿ ಭಾರಿ ಅಗ್ನಿ ಅವಘಡವೊಂದು ನಡೆದಿದ್ದು ಈ ಸ್ಫೋಟದಲ್ಲಿ ಸುಮಾರು 22 ಮಂದಿ ಹಸುನೀಗಿದ್ದಾರೆ ಎಂದು ವರದಿಯಾಗಿದೆ.
           ಚೀನಾದ ಝಾಂಗ್ಜಿಕೌ ನಗರದಲ್ಲಿರುವ ಹೆಬಿ ಷೆನ್ಘುವಾ ಕೆಮಿಕಲ್ ಕಂಪನಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 22 ಮಂದಿ ಸಾವಿಗೀಡಾಗಿ ಇನ್ನೂ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ