ಬ್ರಿಟೀಷ್ ಏರ್ ವೇಸ್ ಪೈಲೆಟ್ ಗಳ ಮುಷ್ಕರ..!

ಲಂಡನ್:

      ಭಾರತದ ಪೈಲೆಟ್ ಗಳ ಸ್ಟ್ರೈಕ್ ಮಾದರಿಯಲ್ಲಿಯೇ ಲಂಡನ್ನಿನ ಪ್ರಸಿದ್ಧ ಬ್ರಿಟೀಷ್ ಏರ್ ವೇಸ್ ಸಂಸ್ಥೆಗೆ ಸೇರಿದ ಪೈಲೆಟ್ ಗಳು ಪ್ರತಿಭಟನೆಗೆ ಇಳಿದಿದ್ದಾರೆ.

      ಬ್ರಿಟಿಷ್ ಏರ್ವೇಸ್ ಸಂಸ್ಥೆಯ ಪೈಲಟ್‌ ಗಳ ಮುಷ್ಕರದಿಂದಾಗಿ ಬ್ರಿಟನ್ ನ ಸರಿ ಸುಮಾರು 1,500 ವಿಮಾನಗಳ ಸಂಚಾರ ರದ್ದುಗೊಂಡಿದ್ದು , ಪರಿಣಾಮ ಅನೇಕ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಕುರಿತು ಬ್ರಿಟನ್ ಪತ್ರಿಕೆಯಾದ ದಿ ಟೆಲಿಗ್ರಾಫ್ ತನ್ನ ವರದಿಯಲ್ಲಿ ತಿಳಿಸಿದೆ, ಪೈಲಟ್ ಗಳ ಮುಷ್ಕರದಿಂದಾಗಿ ಸೋಮವಾರ ಮತ್ತು ಮಂಗಳವಾರ ನಿಗದಿಯಾಗಿದ್ದ 1,500 ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಅಲ್ಲದೆ ಮುಷ್ಕರದಿಂದಾಗಿ ಸುಮಾರು 280,000 ಪ್ರಯಾಣಿಕರ ಪ್ರಯಾಣದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

     ಕಳೆದ ತಿಂಗಳೇ ಈ ಕುರಿತಂತೆ ಬ್ರಿಟೀಷ್ ಏರ್ ಲೈನ್ ಸಂಸ್ಥೆಗೆ ಪೈಲಟ್ ಗಳ ಒಕ್ಕೂಟ ನೋಟಿಸ್ ಜಾರಿ ಮಾಡಿತ್ತು. ತಿಂಗಳೊಳಗೆ ವೇತನ ಸಮಸ್ಯೆ ಪರಿಹರಿಸದಿದ್ದರೆ, ಸೆಪ್ಟೆಂಬರ್ 9 ರಿಂದ 11ರವರೆಗೂ ಮುಷ್ಕರ ನಡೆಸುವುದಾಗಿ ಹೇಳಿತ್ತು. ಈ ನೋಟಿಸ್ ಗೆ ಉತ್ತರ ನೀಡಿದ್ದ ಬ್ರಿಟೀಷ್ ಏರ್ ಲೈನ್ ಸಂಸ್ಥೆ ಶೀಘ್ರ ಕೈಗಾರಿಕಾ ಸಭೆ ಕರೆದು ಚರ್ಚೆ ನಡೆಸುವುದಾಗಿ ಹೇಳಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಸಭೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ ಬ್ರಿಟೀಷ್ ಏರ್ ಲೈನ್ ಸಂಸ್ಥೆ ತಿಳಿಸಿದೆ. 

    ನಿಗದಿಯಾಗಿದ್ದ ಸಭೆಯನ್ನು ಉದ್ದೇಶ ಪೂರ್ವಕವಾಗಿಯೇ ಮುಂದೂಡಲಾಗಿದೆ. ಇನ್ನು ಈ ಹಿಂದಿನ ಸಂಧಾನದಲ್ಲಿ ಬ್ರಿಟೀಷ್ ಏರ್ವೇಸ್ ಸಂಸ್ಥೆಯ ತನ್ನ ಲಾಭವನ್ನು ಪೈಲಟ್ ಗಳೊಂದಿಗೆ ಹಂಚಿಕೊಳ್ಳಲು ನಿರಾಕರಿಸಿತ್ತು. ಆದರೆ ಇದಕ್ಕೆ ಪೈಲಟ್ ಗಳ ಒಕ್ಕೂಟ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸಂಸ್ಛೆಗೆ ಬರುವ ಲಾಭಾಂಶವನ್ನು ಪೈಲಟ್ ಗಳಿಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

     ಇನ್ನು ಏರ್ ಲೈನ್ ಸಂಸ್ಥೆ ಮತ್ತು ಪೈಲಟ್ ಗಳ ನಡುವಿನ ತಿಕ್ಕಾಟದಲ್ಲಿ ಬ್ರಿಟನ್ ವಿಮಾನ ಪ್ರಯಾಣಿಕರು ಹೈರಾಣಾಗಿದ್ದು, ಪರ್ಯಾಯ ಏರ್ ಲೈನ್ ಗಳತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap