ಶಿಖರ್‌ ಧವನ್‌ ಜೊತೆಗೆ ಕಂಡ ಆ ಮಿಸ್ಟ್ರಿ ಲೇಡಿ ಯಾರು ಗೊತ್ತಾ….?

ಮುಂಬಯಿ: 

    ಟೀಮ್‌ ಇಂಡಿಯಾದ ಮಾಜಿ ಎಡಗೈ ಬ್ಯಾಟರ್‌ ಶಿಖರ್ ಧವನ್  ಅವರ ವಿಚ್ಛೇದಿತ ಪತ್ನಿ ಆಯೆಷಾ ಮುಖರ್ಜಿ ಧವನ್​ ಬಾಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಆಯೇಷಾ ಅವರಿಂದಾಗಿ ಧವನ್​ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಹಲವು ಬಾರಿ ತಮ್ಮ ಪತ್ನಿಯ ಕಿರುಕುಳದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಧವನ್‌ ಅಳಲು ತೋಡಿಕೊಂಡಿದ್ದರು. ಇದೀಗ ಧವನ್‌ ಬಾಳಲ್ಲಿ ಸಂತಸದ ದಿನಗಳು ಬರುವ ಸೂಚನೆಯೊಂದು ಲಭಿಸಿದೆ. ಹೌದು, ಧವನ್‌ ವಿಮಾನ ನಿಲ್ದಾಣದಲ್ಲಿ ಹೊಸ ಹುಡುಗಿಯೊಂದಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಹೀಗಾಗಿ ನೆಟ್ಟಿಗರು ಧವನ್‌ 2ನೇ ಮದುವೆಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾರಂಭಿಸಿದ್ದಾರೆ.

   ಧವನ್‌ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಮಿಸ್ಟರಿ ಗರ್ಲ್‌ ಜತೆಗೆ ಕಾಣಿಸಿಕೊಂಡಿದ್ದಾರೆ. ಒಂದೇ ಕಾರ್‌ನಲ್ಲಿ ಬಂದ ಈ ಹುಡುಗಿ ಧವನ್‌ ಅವರೊಂದಿಗೆ ವಿಮಾನ ನಿಲ್ದಾಣದ ಒಳಗಡೆ ತೆರಳಿದ್ದಾರೆ. ಪಾಪರಾಜಿಗಳು ಫೋಟೊ ತೆಗೆಯಲು ಮುಂದಾದಾಗ ಹುಡುಗಿ ಕ್ಯಾಮರಾದಿಂದ ತನ್ನನ್ನು ರಕ್ಷಿಸಿಕೊಳ್ಳುವುದು ಮತ್ತು ನಾಚಿಕೆಪಡುವುದು ಕಂಡುಬಂದಿದೆ. ಈ ವಿಡಿಯೊ ಕಂಡ ಧವನ್‌ ಅಭಿಮಾನಿಗಳು ಆದಷ್ಟು ಬೇಗ ಸಿಹಿ ಸುದ್ದಿಯನ್ನು ನೀಡಿ ಎಂದು ಕಮೆಂಟ್‌ ಮಾಡಿದ್ದಾರೆ. 

   ಯಾರಿಗೂ ಕೇಡು ಬಯಸದ, ಕ್ರಿಕೆಟ್​ನ ಅಜಾತ ಶತ್ರು ಎಂದು ಗುರುತಿಸಿಕೊಂಡಿರುವ ಧವನ್​ ಅವರ ಬಾಳಲ್ಲಿ ನೋವು ಉಂಟು ಮಾಡಲು ಅವರ ವಿಚ್ಛೇದಿತ ಪತ್ನಿ ಆಯೇಶಾ ಮುಖರ್ಜಿ ಕಾರಣ. ಹಲವು ಬಾರಿ ಧವನ್​ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಾನಹಾನಿ ಮಾಡಿದ್ದರು. ಶಿಖರ್​​​ ಧವನ್‌ ಮತ್ತು ಆಯೆಷಾ ಮುಖರ್ಜಿ 2021ರ ಸೆಪ್ಟೆಂಬರ್​ನಲ್ಲಿ ವಿಚ್ಛೇದನ ಪಡೆದಿದ್ದರು ಕೂಡ ಕೋರ್ಟ್​ ಇದನ್ನು ಅಧಿಕೃತಪಡಿಸಿದ್ದು, ಕಳೆದ ವರ್ಷ ಅಕ್ಟೋಬರ್ 4 ರಂದು. ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು. ಆಯೇಷಾ ಶಿಖರ್ ಅವರನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸಿದ್ದರು. ಅಲ್ಲದೆ ಪುತ್ರನನ್ನು ಭೇಟಿಯಾಗದಂತೆ ಕೂಡ ಮಾಡಿದ್ದರು. ಆದರೆ ಕೋರ್ಟ್​ ಧವನ್​ಗೆ ನ್ಯಾಯ ಒದಗಿಸಿತ್ತು.

   ಶಿಖರ್​ ಧವನ್​ ಅವರು ಇದೇ ಆಗಸ್ಟ್‌ನಲ್ಲಿ ಎಲ್ಲ ಮಾದರಿಯ ಅಂತಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಭಾರತ ಪರ ಧವನ್‌ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್​ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್​ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್​ 68 ಪಂದ್ಯ ಆಡಿ 1759 ರನ್​ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.

Recent Articles

spot_img

Related Stories

Share via
Copy link