ನವದೆಹಲಿ:
ಭಾರತ-ಚೀನಾ ಗಡಿಯಲ್ಲಿರುವ ವಾಯುನೆಲೆಯನ್ನು ಭಾರತ ಮೇಲ್ದರ್ಜೇಗೇರಿಸುತ್ತಿರುವ ಬೆನ್ನಲ್ಲೇ, ದೆಹಲಿಯಿಂದ ಸುಮಾರು 1,350 ಕಿ.ಮೀ ದೂರದಲ್ಲಿರುವ ಟಿಬೆಟ್ ನಲ್ಲಿರುವ ತನ್ನ ದೇಶದ ವಿಮಾನ ನಿಲ್ದಾಣವನ್ನು ಚೀನಾ, ವಾಯುನೆಲೆಯನ್ನಾಗಿ ಪರಿವರ್ತಿಸಿದೆ.
ಲಾಸಾದಲ್ಲಿರುವ ಗೊಂಗರ್ ವಿಮಾನ ನಿಲ್ದಾಣವನ್ನು ಮಿಲಿಟರಿ ಬೇಸ್ ಆಗಿ ಪರಿವರ್ತಿಸಿಕೊಳ್ಳುವ ಮೂಲಕ ಭಾರತದ ಬಗೆಗಿನ ತನ್ನ ಭಯವನ್ನು ತೋರಿಸಿಕೊಂಡಿದೆ ಮತ್ತು ಉಪಖಂಡದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಚೀನಾ ಮುಂದಾಗಿದೆ. ಜೊತೆಗೆ, 36 ಫೈಟರ್ ವಿಮಾನಗಳನ್ನು ಇಲ್ಲಿ ಸನ್ನದ್ದ ಸ್ಥಿತಿಯಲ್ಲಿ ನಿಯೋಜಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








