ಅಮೇರಿಕಕ್ಕೆ ಚೀನಾ ಎಚ್ಚರಿಕೆ …!!!

ಬೀಜಿಂಗ್‌:
         ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ಜಾಗತಿಕ ಉಗ್ರ ಎಂದು ಘೋಷಿಸುವ ನಿಟ್ಟಿನಲ್ಲಿ ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿ ಕರಡು ನಿರ್ಣಯ ಮಂಡಿಸುತ್ತಿದೆ ಎಂದು ಚೀನಾ ಆರೋಪಿಸಿದೆ . ಅಲ್ಲದೆ ಅಮೆರಿಕದ ಈ ನಡೆ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ ಎಂದು ಹೇಳಿದೆ.
       ಮಸೂದ್ ಅಜರ್ ವಿರುದ್ಧ ಬಲವಂತದಿಂದ ನಿರ್ಣಯ ಮಂಡಿಸುವುದನ್ನು ತಪ್ಪಿಸಬೇಕು ಮತ್ತು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಅಮೆರಿಕಕ್ಕೆ ಚೀನಾ ಎಚ್ಚರಿಕೆ ನೀಡಿದೆ.
        ಸಂವಾದ ಮತ್ತು ಮಾತುಕತೆಯ ಮೂಲಕ ನಿರ್ಣಯವನ್ನು ಮಂಡಿಸುವ ಕ್ರಮಕ್ಕೆ ತಕ್ಕುದಾದ ರೀತಿಯಲ್ಲಿ ನಡೆಯುತ್ತಿಲ್ಲ. ಇದರಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರ ನಿಗ್ರಹ ಸಮಿತಿಯ ಅಧಿಕಾರ ಕುಗ್ಗುವಂತಾಗಿದೆ. ಅಮೆರಿಕ ವಿಶ್ವಸಂಸ್ಥೆಯನ್ನು ಕಡೆಗಣಿಸುತ್ತಿದ್ದು. ಭದ್ರತಾ ಮಂಡಳಿಯ ಸದಸ್ಯರಲ್ಲಿನ ಒಗ್ಗಟ್ಟು ಮತ್ತು ಏಕತೆಗೆ ಇದು ಪೂರಕವಾಗಿಲ್ಲ. ಇದರಿಂದಾಗಿ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಅವರು ತಿಳಿಸಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link