ಚೀನಾ:
ಸದ್ಯ ಚೀನಾ ಸೇರಿದಂತೆ ಜಗತ್ತಿನಾಧ್ಯಂತ ಭಯವನ್ನು ಸೃಷ್ಠಿಸಿರುವ ಕರೋನವೈರಸ್ ಸೋಕಿನಿಂದಾಗಿ ಆಹಾರ ತಯಾರಿಕೆ ಮತ್ತು ಸರಬರಾಜು ಸಂಸ್ಥೆಗಳಾದ ಮೆಕ್ಡೊನಾಲ್ಡ್ಸ್ ಕಾರ್ಪ್, ಸ್ಟಾರ್ಬಕ್ಸ್ ಕಾರ್ಪ್ ಮತ್ತು ಇನ್ನಿತರೆ ಫಾಸ್ಟ್ ಫುಡ್ ಕಂಪನಿಗಳು ಕಾರ್ಮಿಕರು ಮತ್ತು ಗ್ರಾಹಕರನ್ನು ಸುರಕ್ಷತಾ ದೃಷ್ಟಿಯಿಂದ ಫುಡ್ ಡೆಲಿವರಿಗೆ ಹೊಸ ಮಾರ್ಗೋಪಾಯ ಕಂಡು ಹಿಡಿಕೊಂಡಿವೆ ಅದುವೆ “ಕಾಂಟ್ಯಾಕ್ಟ್ ಲೆಸ್ ಡೆಲಿವೆರಿ”.
ಊಹೆಗೂ ಮೀರಿ ವ್ಯಾಪಿಸಿರುವ ಕೊರೊನಾ ವೈರಸ್ ನಿಂದಾಗಿ ಮೆಕ್ಡೊನಾಲ್ಡ್ಸ್ ಕಾರ್ಪ ಚೀನಾದಾದ್ಯಂತ ಇರುವ ತನ್ನ ಮಳಿಗೆಗಳಲ್ಲಿ ಬಿಗ್ ಮ್ಯಾಕ್ಸ್, ಫ್ರೈಸ್ ಮತ್ತು ಇತರ ಆಹಾರೋತ್ಪನ್ನಗಳನ್ನು “ಕಾಂಟ್ಯಾಕ್ಟ್ ಲೆಸ್ ಡೆಲಿವೆರಿ” ಮೂಲಕ ವಿತರಣೆ ಮಾಡುತ್ತಿದೆ.
ಕೊರೋನಾ ತಡೆಗಟ್ಟಲು “ಕಾಂಟ್ಯಾಕ್ಟ್ ಲೆಸ್ ಡೆಲಿವೆರಿ” ಹೇಗೆ ಸಹಾಯ ಮಾಡುತ್ತದೆ …?
ಗ್ರಾಹಕರು ತಮ್ಮ ಬಿ ಇರುವ ಮೊಬೈಲ್ ಆಪ್ ಅಥವಾ ಕಂಪೂಟರ್ ಬಳಸಿ ಆರ್ಡರ್ ಮಾಡಿದ ಆಹಾರವನ್ನು ,ಸಮಾನ್ಯವಾಗಿ ಆರ್ಡರ್ ಮಾಡಿದಾಗ ಬರುವಂತೆಯೇ ಡೆಲಿವೆರಿ ಬಾಯ್ ತರುತ್ತಾನೆ ಆದರೆ ಆಹಾರದ ಪೊಟ್ಟಣ ನೀಡುವ ವಿಧಾನದಲ್ಲಿ ಬದಲಿ ಮಾಡಲಾಗಿದೆ . ಅದು ಏನೆಂದರೆ ನೀವು ಆರ್ಡರ್ ಮಾಡುವುದು , ಮನೆಯ ಬಾಗಿಲಿಗೆ ಬರುವುದು ಎಲ್ಲಾ ಮೊದಲಿನಂತೆಯೇ ಅದರೆ ಈ ಮೊದಲು ಆರ್ಡರ್ ಅನ್ನು ಕೈಗೆ ಕೊಡುತ್ತಿದ್ದ ಸಿಬ್ಬಂದಿ ಈಗ ಆಹಾರವನ್ನು ಸ್ವಚ್ಚಗೊಳಿಸಿದ ನೆಲದ ಮೇಲೆಯೋ ಅಥವಾ ನಿರ್ಧಿಷ್ಟ ಜಾಗದಲ್ಲಿಯೋ ಇಟ್ಟು ಹೋಗುತ್ತಾರೆ ಮತ್ತು ಹಣವನ್ನು ಆನ್ ಲೈನ್ ಮೂಲಕ ಪಾವತಿ ಮಾಡಬೇಕಾಗಿರುತ್ತದೆ . ಇದನ್ನು ಗಮನಿಸಿದ ಹಲವು ಕಂಪನಿಗಳು ಸಹ ಇದೇ ಪದ್ದತಿ ಅನುಸರಿಸಲು ಶುರು ಮಾಡಿದ್ದಾರೆ ಈ ರೀತಿ ಮಾಡಿದರೆ ಕೊರೋನಾ ವೈರಸ್ ಸಂಪೂರ್ಣ ನಾಶವಾಗದಿದ್ದರೂ ತಕ್ಕ ಮಟ್ಟಿಗೆ ಹರಡುವಿಕೆಯ ತಡೆಯಬಹುದು ಎಂಬುದು ಕಂಪನಿಗಳ ವಾದ , ಮತ್ತು ಈ ರೀತಿಯ ಹೊಸ ಆಲೋಚನೆಗೆ ಜನತೆ ಕೂಡ ಸಹಕರಿಸುತ್ತಿದ್ದಾರೆ ಎನ್ನಲಾಗಿದೆ .
ಜ್ವರ ತರಹದ ವೈರಸ್ ಜಾಗತಿಕವಾಗಿ 68,500 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಭಾನುವಾರದ ವೇಳೆಗೆ 1,665 ಜನರನ್ನು ಕೊಂದಿದೆ, ಹೆಚ್ಚಾಗಿ ಮಧ್ಯ ಚೀನಾದ ಪ್ರಾಂತ್ಯದ ಹುಬೈನಲ್ಲಿ.ಹೊಸ ವರ್ಷದ ರಜಾದಿನದ ನಂತರ ಚೀನಾ ತನ್ನ ಆರ್ಥಿಕತೆಯನ್ನು ಮರಳಿ ಪಡೆಯಲು ಹೆಣಗಾಡುತ್ತಿರುವುದರಿಂದ ಕೆಲವು ಪ್ರಮುಖ ಚೀನೀ ನಗರಗಳು ಇನ್ನೂ ಭೂತ ಪಟ್ಟಣಗಳನ್ನು ಹೋಲುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಫೆಬ್ರವರಿ ಆರಂಭದಲ್ಲಿ, ಬೀಜಿಂಗ್ ಮೂಲದ ದತ್ತಾಂಶ ಸಂಸ್ಥೆ ಬಿಗ್ ಒನ್ ಲ್ಯಾಬ್ ಪ್ರಕಾರ, ಮೀಟುವಾನ್-ಡಯಾನ್ಪಿಂಗ್ ನಲ್ಲಿ ಸರಿ ಸುಮಾರು 83% ಮುಚ್ಚಲ್ಪಟ್ಟಿದೆ. ಈ ತಿಂಗಳ ಆರಂಭದಲ್ಲಿ, ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಡೆಲಿವರಿಗಳನ್ನು ಮಿತಿಗೊಳಿಸುವಂತೆ ಶಿಫಾರಸು ಮಾಡಿದೆ.
ಇನ್ನು ಜಗತ್ಪ್ರಸಿದ್ದ ಕಾಫಿ ಸಂಸ್ಥೆಯಾದ ಸ್ಟಾರ್‌ಬಕ್ಸ್ ಹೇಳುವ ಪ್ರಕಾರ ಗ್ರಾಹಕರು ತನ್ನ ಅಪ್ಲಿಕೇಷನ್ ಬಳಸಿ ತಮಗಿಷ್ಠವಾದ ಕಾಫಿಯನ್ನು ಆರ್ಡರ್ ಮಾಡಿ ನಂತರ ಮಳಿಗೆಯ ಹೊರಗೆ ನಿಂತುಕೊಳ್ಳಬೇಕು ನಂತರದಲ್ಲಿ ಕಂಪನಿಯೂ ಗ್ರಾಹಕರ ಆರ್ಡರ್ ತಯಾರಾದ ಕೂಡಲೆ ಒಳ ಬರಲು ಸೂಚಿಸುತ್ತದೆ ಓಳ ಬಂದ ನಂತರ ಅವರ ಕಾಫಿಯನ್ನು ಒಂದು ನಿರ್ಧಿಷ್ಠ ಟೇಬಲ್ ಮೇಲೆ ಇರಿಸಲಾಗಿರುತ್ತದೆ ,ಓಳ ಬರುವ ಮುನ್ನ ಅವರ ದೇಹದ ಉಷ್ಣಾಂಶವನ್ನು ನೋಡಿ ನಂತರ ಒಳಗಡೆ ಬಿಡಲಾಗುತ್ತದೆ ಎಂದು ಸ್ಟಾರ್ ಬಕ್ಸ್ ತಿಳಿಸಿದೆ. ಮತ್ತು ಕಾಫಿ ನೀಡುವ ಲೋಟಗಳನ್ನು ಮುಂಚಿತವಾಗಿಯೇ ತೊಳೆಯಲಾಗಿರುತ್ತದೆ ಮತ್ತು ಈಗ ಇನ್ನೂ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
