ನ್ಯೂಯಾರ್ಕ್:
ವಿಶ್ವದ ದೊಡ್ಡಣ್ಣ ಕರೆಸಿಕೊಳ್ಳುವ ಅಮೆರಿಕಾದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9,500 ದಾಟಿದೆ. ದೇಶದಲ್ಲಿ ಇದುವರೆಗೆ ಒಟ್ಟು 3,37,310 ಮಂದಿ ಕೊರೋನಾ ಸೋಂಕಿತರು ದೃಢಪಟ್ಟಿದ್ದು 9ಸಾವಿರದ 634 ಮಂದಿ ಮೃತಪಟ್ಟಿದ್ದಾರೆ.
ಇಲ್ಲಿ ಕಳೆದ 24 ಗಂಟೆಗಳಲ್ಲಿ 1,200 ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು 4 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯಲ್ಲಿ 846, ಮಿಚಿಗನ್ ನಲ್ಲಿ 540, ಕ್ಯಾಲಿಫೋರ್ನಿಯಾದಲ್ಲಿ 324 ಸಾವಿನ ಪ್ರಕರಣಗಳು ವರದಿಯಾಗಿವೆ.ಜಾನ್ ಹಾಪ್ ಕಿನ್ಸ್ ಕೊರೋನಾ ವೈರಸ್ ಅಂಕಿಅಂಶ ಸಂಗ್ರಹ ಕೇಂದ್ರದಿಂದ ಈ ಮಾಹಿತಿ ಸಿಕ್ಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








