ಗುವಾಡೊ ವಿರುದ್ಧ ಕ್ರಿಮಿನಲ್ ವಿಚಾರಣೆ

ಕರಾಕಸ್

       ವೆನಿಜುವೆಲಾ ಪ್ರತಿಪಕ್ಷ ನಾಯಕ ಹಾಗೂ ಸ್ವಯಂ ಘೋಷಿತ ರಾಷ್ಟ್ರಪತಿ ಜುವಾನ್ ಗುವಾಡೊ ವಿರುದ್ಧ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಹಾಗೂ ಪ್ರಾಸಿಕ್ಯೂಟರ್ ಜನರಲ್ ಕ್ರಿಮಿನಲ್ ವಿಚಾರಣೆ ಆರಂಭಿಸಿವೆ.ತನ್ನನ್ನು ವೆನಿಜುವೆಲಾದ ರಾಷ್ಟ್ರಪತಿ ಎಂದು ಘೋಷಣೆ ಮಾಡಿಕೊಂಡಿದ್ದ ಗುವಾಡೊ ವಿರುದ್ಧ ನ್ಯಾಯಾಂಗ ವಿಚಾರಣೆ ಅವಧಿಯನ್ನು ವಿಸ್ತರಿಸಲು ರಾಷ್ಟ್ರೀಯ ಸಂವಿಧಾನ ಸಭೆ ನಿರ್ಧರಿಸಿತ್ತು ಎಂದು ಸಭೆಯ ಸದಸ್ಯ ಜೂಲಿಯೋ ಗಾರ್ಸಿಯಾ ತಿಳಿಸಿದ್ದಾರೆ.

        ಪ್ರತಿಪಕ್ಷ ನಾಯಕ ಗುವಾಡೊ ಅವರನ್ನು ಕೆಳಗಿಳಿಸಲು ಕ್ರಿಮಿನಲ್ ವಿಚಾರಣೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೆನಿಜುವೆಲಾ ಸಂವಿಧಾನ ಸಭೆಯ ಪ್ರಮುಖ ಡಿಸೋಸ್ ಡಾಡೊ ಕೆಬೆಲೋ ಹೇಳಿದ್ದಾರೆ.

       ಸರ್ವೋಚ್ಚ ನ್ಯಾಯಾಲಯ ಹಾಗೂ ಪ್ರಾಸಿಕ್ಯೂಟರ್ ಜನರಲ್ ನೇತೃತ್ವದಲ್ಲಿ ಗುವಾಡೊ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸಲಾಗಿದ್ದು, ಕಾನೂನು ವ್ಯವಸ್ಥೆಗೆ ಸಂಬಂಧಿಸಿದ ಸಾಕ್ಷ್ಯಗಳ ಆಧಾರದ ಮೇಲೆ ತೀರ್ಪು ನೀಡಲಿದೆ ಎಂದು ಸಂವಿಧಾನ ಸಭೆಯ ಕಾನೂನು ಸಮಿಯ ಪ್ರಮುಖ ಗಾರ್ಸಿಯಾ ಜೆರೆಪಾ ತಿಳಿಸಿದ್ದಾರೆ.

      ಗುವಾಡೊ ಅವರಿಗೆ ತಮ್ಮ ವಾದ ಮಂಡಿಸುವ ಹಕ್ಕಿದ್ದು, ಅವರು ಮಾಡಿದ ಕೃತ್ಯಕ್ಕೆ ಪ್ರತಿಫಲ ಸಿಗಲಿದೆ. ದೇಶಕ್ಕೆ ದ್ರೋಹ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜೆರೆಪಾ ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link