ಇಸ್ಲಾಮಾಬಾದ್ :
ಪಾಕಿಸ್ಥಾನ ಸದ್ಯ ಆರ್ಥಿಕ ದೀವಾಳಿಯ ಅಂಚಿಗೆ ತಲುಪಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆದ ಕಾರಣ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದ ಪ್ರಜೆಗಳಿಗೆ ಅದರಲ್ಲೂ ಸಿರಿವಂತರು ಹಾಗು ಬೇನಾಮಿ ಆಸ್ತಿಪಾಸ್ತಿ ಹೊಂದಿದವರಿಗೆ, ತಮ್ಮ ಒಟ್ಟು ಸಂಪತ್ತಿನ ಮೌಲ್ಯವನ್ನು ಘೋಷಿಸುವಂತೆ ಆದೇಶಿಸಿದ್ದಾರೆ.
ತೆರಿಗೆ ಸಂಗ್ರಹ ಹೆಚ್ಚಿದರೆ ದೇಶ ಆರ್ಥಿಕವಾಗಿ ದೀವಾಳಿಯಾಗುವುದನ್ನು ತಪ್ಪಿಸಬಹುದಾಗಿದೆ ಇದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ದೇಶ ಪ್ರಜೆಗಳಿಗೆ ಈ ಸಂದೇಶ ನೀಡಿದ್ದಾರೆ.
ದೇಶದ ಪ್ರಜೆಗಳೆಲ್ಲರು ತಮ್ಮ ಆಸ್ತಿಗಳನ್ನು ಘೋಷಣೆ ಸರದ ಆಸ್ತಿ ಘೋಷಣಾ ಯೋಜನೆಯಡಿ ತಮ್ಮ ನೈಜ ಆಸ್ತಿಪಾಸ್ತಿಯನ್ನು ಘೋಷಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಜೆಗಳಿಗೆ ತೆರಿಗೆ ಪಾವತಿಸಲು ವಿನಂತಿಸಿದ್ದಾರೆ ಈಗಿರುವ ಾರ್ಥಿಕ ಪರಿಸ್ಥತಿಯಲ್ಲಿ ದೇಶ ನಡೆಸಲು ಅಥವಾ ದೇಶವನ್ನು ಮೇಲೆತ್ತಲು ನಿಮ್ಮ ಸಹಕಾರ ತುಂಬಾನೆ ಅಗತ್ಯ ಎಂದು ತಿಳಿಸಿದ್ದಾರೆ
ನಮ್ಮ ದೇಶ ಸ್ವಾವಲಂಭಿ ದೇಶವಾಗಬೇಕಾದರೆ ನಾವು ಮೊದಲು ನಮ್ಮನ್ನು ಬದಲಾಯಿಸಿಕೊಳ್ಳಬೇಕು; ಸ್ವಯಂ ಆಸ್ತಿಪಾಸ್ತಿ ಘೋಷಿಸಿಕೊಳ್ಳಲು ಜೂನ್ 30ರ ಅಂತಿಮ ಗಡುವು ನೀಡಿದ್ದು ಗಡುವಿನ ಒಳಗಾಗಿ ಘೋಷಿಸಿ ಎಂದು ಇಮ್ರಾನ್ ಖಾನ್ ದೇಶ ಪ್ರಜೆಗಳಿಗೆ ಮನವಿ ಮಾಡಿದ್ದಾರೆ.