ಭಾರತದಲ್ಲಿ ಆ್ಯಪ್ ನಿಷೇಧ :TIKTOK ಗೆ ಆದ ನಷ್ಟವಾದರೂ ಎಷ್ಡು ಗೊತ್ತೇ..?

ಬೀಜಿಂಗ್:

      ಭಾರತದಲ್ಲಿ ಟಿಕ್ ಟಾಕ್ ನಿಷೇಧ ಮಾಡಿದ  ಕೆಲವು ದಿನಗಳ ಅಂತರದಲ್ಲಿ  ಮಾತೃಸಂಸ್ಥೆಗೆ ಆಗಿರುವ ನಷ್ಟವಾದರು ಎಷ್ಟು ಗೊತ್ತೇ?  ಬರೊಬ್ಬರಿ 6 ಶತಕೋಟಿ ಡಾಲರ್   ಎಂದು ಅಂದಾಜಿಸಲಾಗಿದೆ.

     ಭಾರತದ ಜನರ ಪಂಚ ಪ್ರಾಣಗಳ ಜೊತೆ ಇದೊಂದು ಪ್ರಾಣ ಎಂಬಂತಿದ್ದ  ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಜೂನ್ 29ರಂದು ಆದೇಶ ಹೊರಡಿಸಿದೆ. ಅಂತೆಯೇ ಈಗಾಗಲೇ ಈ ಆ್ಯಪ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಚೀನಾ ಮೂಲದ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಸುರಕ್ಷತೆ ಹಾಗೂ ದತ್ತಾಂಶ ಕಳ್ಳತನ ಆರೋಪದ ಮೇರೆಗೆ ನಿಷೇಧ ಹೇರಿತ್ತು. 

      ಚೀನಾ ಮೂಲದ ಟಿಕ್‌ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಬೈದು ನಕ್ಷೆ, ಹೆಲೋ, ಮಿ ಕಮ್ಯುನಿಟಿ, ಕ್ಲಬ್ ಫ್ಯಾಕ್ಟರಿ, ವೀಚಾಟ್ ಮತ್ತು ಯುಸಿ ನ್ಯೂಸ್ ಸೇರಿದಂತೆ ಚೀನಾ ಲಿಂಕ್‌ಗಳೊಂದಿಗಿನ 59 ಆ್ಯಪ್‌ಗಳನ್ನು ನಿಷೇಧಿಸಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಅಡಿಯಲ್ಲಿ ಈ ಆ್ಯಪ್‌ಗಳನ್ನು ನಿಷೇಧ ಮಾಡಲಾಗಿತ್ತು.
 
     ಇದೀಗ ಟಿಕ್ ಟಾಕ್ ಕಂಪೆನಿಯ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ಗೆ 6 ಶತಕೋಟಿ ಡಾಲರ್  ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿದ್ದು, ಭಾರತ ಚೀನಾ ನಡುವಿನ ಘರ್ಷಣೆಯಿಂದಾಗಿ ಚೀನಾದ ಟಿಕ್ ಟಾಕ್ ಸೇರಿದಂತೆ 59 ಅಪ್ಲಿಕೇಶನ್ ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಭಾರತ ಸರ್ಕಾರದ ಈ ನಿರ್ಧಾರದಿಂದ ಟಿಕ್ ಟಾಕ್ ಕಂಪೆನಿಯ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ಗೆ 6 ಶತಕೋಟಿ ಡಾಲರ್(45 ಸಾವಿರ ಕೋಟಿ ರೂ)ನಷ್ಟವಾಗಿದೆ ಎಂದು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap