“ಹೆಚ್ಚು ಹಿಗ್ಗಬೇಡ ಅಮೆರಿಕಾ, ಶೀಘ್ರದಲ್ಲಿಯೇ ನಾವು ನಮ್ಮ ಸೇಡು ತೀರಿಸಿಕೊಳ್ಳುತ್ತೇವೆ”

ವಾಷಿಂಗ್ಟನ್:

    ಐಸಿಸ್ ಮುಖ್ಯಸ್ಥ ಹಾಗು ಜಾಗತಿಕ ಭಯೋತ್ಪಾದಕ ಬಾಗ್ದಾದಿ ಹತ್ಯೆ ನಂತರ ಅಮೆರಿಕಾ ಮೇಲೆ ತೀವ್ರವಾಗಿ ಕ್ರೋದಗೊಂಡಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ ಉಗ್ರ ಸಂಘಟನೆ ನಿವು ಮಾಡಿದ ತಪ್ಪಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿದೆ . 

   ಅಮೇರಿಕಾಕ್ಕೆ ನೀಡಿದ ವಾರನಿಂಗ್ ಗೆ ಸಂಬಂಧಿಸಿದಂತೆ ಆಡಿಯೋ ಟೇಪ್ ಬಿಡುಗಡೆ ಮಾಡಿರುವ ಐಸಿಸ್, ಬಾಗ್ದಾದಿ ಹತನಾಗಿರುವುದು ನಿಜ.ಇನ್ನು ಆತನ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಂ ಅಲ್ ಹಷಿಮಿ ಅಲ್ ಖುರೇಶಿಯನ್ನು ನೇಮಿಸಲಾಗಿದೆ, ನಮ್ಮ ಸಾಮರ್ಜ್ಯವನ್ನು ಇನಷ್ಟು ವಿಸ್ತರಿಸುತ್ತೇವೆಂದು ಸಾರಿ ಹೇಳಿದೆ. 

   “ಹೆಚ್ಚು ಹಿಗ್ಗಬೇಡ ಅಮೆರಿಕಾ, ಶೀಘ್ರದಲ್ಲಿಯೇ ನಾವು ನಮ್ಮ ಸೇಡು ತೀರಿಸಿಕೊಳ್ಳುತ್ತೇವೆ”. ಇತರೆ ರಾಷ್ಟ್ರಗಳ ಎದುರು ಹೇಗೆ ನಗಪಾಟಲಿಗೆ ಈಡಾಗಿದ್ದೀರಿ ಎಂಬುದನ್ನು ನೀವು ನೋಡುತ್ತಿಲ್ಲ. ನಿಮ್ಮ ಹಣೆಬರಹವು ವಯಸ್ಸಾದ ಮೂರ್ಖನಿಂದ ಆಳಲ್ಪಡುತ್ತಿದೆ. ಒಂದು ಅಭಿಪ್ರಾಯದಿಂದ ನಿದ್ರೆಗೆ ಜಾರುತ್ತಾರೆ. ಮತ್ತೊಬ್ಬರೊಂದಿಗೆ ಎಚ್ಚರಗೊಳ್ಳುತ್ತಾರೆ. ಈಗಾಗಲೇ ಮತ್ತೊಬ್ಬ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು, ನೂತನ ಮುಖ್ಯಸ್ಥ ಸೇಡು ತೀರಿಸಿಕೊಳ್ಳಲಿದ್ದಾರೆ. ಬಾಗ್ದಾದಿ ಇದ್ದ ದಿನಗಳ ಸಾಧನೆಗಳನ್ನು ಸಹಿ ಮಾಡಲಿದ್ದಾರೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link