ಮಹಾ ಚುನಾವಣೆ : ಈ ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ….!

ಮಹಾರಾಷ್ಟ್ರ

    ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಇದೇ ತಿಂಗಳು 20ಕ್ಕೆ ಮಹಾರಾಷ್ಟ್ರ ಚುನಾವಣೆ ನಡೆಯುತ್ತಿದೆ. ಇದೀಗ ಈ ರಾಜ್ಯದಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಆದರೆ, ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆ ಕೂತುಹಲಕಾರಿ ಬೆಳವಣಿಗೆಗಳ ನಡೆದಿವೆ.

   ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಈಗಾಗಲೇ ರಂಗೇರಿದೆ. ಈ ಬಾರಿಯ ಮಹಾರಾಷ್ಟ್ರ ಚುನಾವಣೆ ಹಲವು ಕಾರಣಕ್ಕೆ ಮಹತ್ವದ್ದಾಗಿದೆ. ಆದರೆ, ನಾಮಪತ್ರ ಸಲ್ಲಿಕೆ ದಿನಾಂಕ ಮುಕ್ತಾಯವಾದರೂ, ಮಹಾರಾಷ್ಟ್ರದ ಪ್ರಮುಖ ಮೈತ್ರಿ ಪಕ್ಷಗಳು ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿಲ್ಲ ಎಂದೇ ಹೇಳಲಾಗುತ್ತಿದೆ.

   ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿ ಇರುವ ಹಾಗೂ ವಿರೋಧ ಪಕ್ಷದಲ್ಲಿ ಇರುವ ಎರಡೂ ಮೈತ್ರಿಕೂಟ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಆಡಳಿತ ಪಕ್ಷದಲ್ಲಿರುವ ಬಿಜೆಪಿ, ನ್ಯಾಷನಲಿಸ್ಟ್‌ (ಅಜಿತ್‌ಪವಾರ್) ಹಾಗೂ ಶಿವಸೇನಾ (ಏಕನಾಥ್‌ ಶಿಂಧೆ) ಇದ್ದರೆ, ವಿರೋಧಿ ಬಣದಲ್ಲಿ ಕಾಂಗ್ರೆಸ್‌, ನ್ಯಾಷನಲಿಸ್ಟ್‌ ಕಾಂಗ್ರೆಸ್‌ (ಶರದ್‌ ಪವಾರ್) ಹಾಗೂ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಪಕ್ಷಗಳು ಇವೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳು ಇದ್ದು, 145 ಮ್ಯಾಜಿಕ್‌ ಸಂಖ್ಯೆ ಆಗಿದೆ.

   ಮಹಾರಾಷ್ಟ್ರದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದೆ. ಆದರೆ, ಇಲ್ಲಿಯ ವರೆಗೆ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿ, ನ್ಯಾಷನಲಿಸ್ಟ್‌ (ಅಜಿತ್‌ಪವಾರ್) ಹಾಗೂ ಶಿವಸೇನಾ (ಏಕನಾಥ್‌ ಶಿಂಧೆ) ಪಕ್ಷಗಳನ್ನು ಇಲ್ಲಿ ಮಹಾಯುತಿ ಎಂದೂ ಹಾಗೂ ವಿರೋಧಿ ಬಣದಲ್ಲಿ ಕಾಂಗ್ರೆಸ್‌, ನ್ಯಾಷನಲಿಸ್ಟ್‌ ಕಾಂಗ್ರೆಸ್‌ (ಶರದ್‌ ಪವಾರ್) ಹಾಗೂ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಪಕ್ಷಗಳನ್ನು ಮಹಾವಿಕಾಸ್‌ ಅಘಾಡಿ ಎಂದು ಕರೆಯಲಾಗುತ್ತದೆ.

  ಇದೀಗ ಮಹಾಯುತಿ ಹಾಗೂ ಮಹಾವಿಕಾಸ್‌ ಅಘಾಡಿ ಎರಡೂ ಮಿತ್ರಪಕ್ಷಗಳು ಮಹಾರಾಷ್ಟ್ರದಲ್ಲಿ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾದರೂ, 15 ಕ್ಷೇತ್ರಗಳಲ್ಲಿ ನಾಮಪತ್ರವನ್ನೇ ಸಲ್ಲಿಸಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಅಚ್ಚರಿಯ ಬೆಳವಣಿಗೆಯೂ ನಡೆದಿದೆ.

  15 ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಲು ವಿಫಲ: ಇನ್ನು 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿ ಮಹಾಯುತಿ ಹಾಗೂ ಮಹಾವಿಕಾಸ್‌ ಅಘಾಡಿ ಎರಡೂ ಮಿತ್ರ ಪಕ್ಷಗಳು ವಿಫಲವಾಗಿವೆ. ಇಲ್ಲಿನ ವಿಧಾನಸಭೆ ಚುನಾವಣಾ ಅವಧಿ ಮುಕ್ತಾಯವಾದರೂ, 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಅಂತಿಮವಾಗಿಲ್ಲ. ಇದರಲ್ಲಿ ಮಹಾವಿಕಾಸ್‌ ಅಘಾಡಿಯದ್ದೇ ದೊಡ್ಡ ಪಾಲಿದೆ. ಮಹಾಯುತಿ 4 ಹಾಗೂ ಮಹಾವಿಕಾಸ್ ಅಘಾಡಿ 11 ಕ್ಷೇತ್ರ ಸೇರಿ ಒಟ್ಟು 15 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮವಾಗಿಯೇ ಇಲ್ಲ!

ಮಹಾಯುತಿ ಒಟ್ಟು 284 ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ 152, ಎನ್‌ಸಿಪಿ (ಅಜಿತ್‌ ಬಣ) 52, ಶಿವಸೇನೆ (ಏಕನಾಥ್‌ ಶಿಂಧೆ ಬಣ) 80 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಆದರೆ, 288 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ.

ಇನ್ನು ಮಹಾವಿಕಾಸ್‌ ಅಘಾಡಿ ಮೈತ್ರಿ ಪಕ್ಷಗಳು 11 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಿಸಿಯೇ ಇಲ್ಲ. ಕಾಂಗ್ರೆಸ್‌ 103, ಶಿವಸೇನೆ (ಉದ್ಧವ್ ಠಾಕ್ರೆ ಬಣ) 87, ಎನ್‌ಸಿಪಿ (ಶರದ್ ಪವಾರ್‌ ಬಣ) 87 ಅಭ್ಯರ್ಥಿ ಘೋಷಿಸಿದೆ. ಆದರೆ, ಇದರ ಹೊರತಾಗಿ 11 ಕ್ಷೇತ್ರಗಳಿಗೆ ಮೈತ್ರಿ ಅಭ್ಯರ್ಥಿಗಳೇ ಇಲ್ಲ ಎನ್ನಲಾಗಿದೆ

Recent Articles

spot_img

Related Stories

Share via
Copy link