ವಾಷಿಂಗ್ಟನ್:
ಈಗಾಗಲೆ ಭೂಮಿ ಶಾಶ್ವತ ಚಂದ್ರನನ್ನು ಹೊಂದಿದೆ ಭೂಮಿಗೆ ಈಗ ಹೊಸ ಪುಟಾಣಿ ಚಂದಿರನೊಬ್ಬ ಸಿಕ್ಕಿದ್ದಾನೆ ಅವನೆ ‘2020 ಸಿ.ಡಿ. 3’ ಎಂದು ಆ ಚಂದ್ರನಿಗೆ ಹೆಸರಿಡಲಾಗಿದೆ. 3 ವರ್ಷಗಳಿಂದ ಈತ ಭೂಮಿಯನ್ನು ಸುತ್ತುತ್ತಿದ್ದಾನೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಮೆರಿಕದ ಆ್ಯರಿಝೋನಾದ ಕೆಟಾಲಿನಾ ಸ್ಕೈ ಸರ್ವೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಗೋಳ ವಿಜ್ಞಾನಿಗಳು ಇದೇ ಫೆ. 19ರಂದು ಭೂಮಿಯನ್ನು ವೇಗವಾಗಿ ಸುತ್ತುತ್ತಿರುವ ಬೆಳಕಿನ ಉಂಡೆಯನ್ನು ಹೊಸದಾಗಿ ಪತ್ತೆ ಹಚ್ಚಿದ್ದರು.ಈಗ ಪತ್ತೆಯಾಗಿರುವ ‘2020 ಸಿ.ಡಿ. 3’ ಚಂದ್ರನಿಗೆ ನಿಖರವಾದ ಕಕ್ಷೆಯೆಂಬುದೇ ಇಲ್ಲ. ಹಾಗಾಗಿ, ಕೆಲವು ದಿನಗಳ ಅನಂತರ ಭೂಮಿಯ ಪರಿಧಿಯಿಂದ ಆಚೆ ಸರಿಯುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದೆ, ಪತ್ತೆಯಾಗಿದ್ದ ‘ಆರ್ಎಚ್120’ ಎಂಬ ಚಂದ್ರ ಸಹ ನಿಖರ ಕಕ್ಷೆ ಹೊಂದಿರದ ಕಾರಣ, 2006ರ ಸೆಪ್ಟಂಬರ್ನಿಂದ 2007ರ ಜೂನ್ರವರೆಗೆ ಮಾತ್ರ ಭೂಮಿಯನ್ನು ಸುತ್ತಿ ಅನಂತರ ನಾಪತ್ತೆಯಾಗಿದ್ದ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ