ಇಂಡೋನೇಷ್ಯಾ
ಸಮುದ್ರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಪರಿಸರ ಹಾಳು ಮಾಡುವುದಲ್ಲಿ ಎರಡನೆ ಸ್ಥಾನದಲ್ಲಿದ್ದ ನಮ್ಮ ನೆರೆಯ ಇಂಡೋನೇಷ್ಯಾ ಇಂದು ಆ ಹಣೆಪಟ್ಟಿಯಿಂದ ಹೊರಬರಲು ಸರ್ವ ಪ್ರಯತ್ನ ಮಾಡುತ್ತಿದೆ ಇದರ ಭಾಗವಾಗಿಯೇ ದಿನನಿತ್ಯ ಸಮಗ್ರಹವಾಗುವ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಉದ್ದೇಶದಿಂದ ೊಂದು ಹೊಸ ಕಾರ್ಯಕ್ರಮ ಜಾರಿಗೆ ತಂದಿದೆ .
ಅದುವೇ ಪ್ಲಾಸ್ಟಕ್ ನೀಡಿ ಬಸ್ ಟಿಕೆಟ್ ಪಡೆಯಿರಿ ಎಂಬ ಕಾರ್ಯಕ್ರಮ ಇದರಲ್ಲಿ ಸಾರ್ವಜನಿಕರು ತಾವು ದಿನನಿತ್ಯ ಬಳಸುವ ವಾಟರ್ ಕ್ಯಾನ್ ಇನ್ನೂ ಮುಂತಾದ ಪ್ಲಾಸ್ಟಿಕ್ ಅನ್ನು ನೀಡಿ ತಮ್ಮ ಪ್ರಯಾಣದ ಟಿಕೆಟ್ ಅನ್ನು ಉಚಿತವಾಗಿ ಪಡೆಯ ಬಹುದಾಗಿದೆ .ಈ ಕಾರ್ಯಕ್ರಮದ ಮೂಲಕ 2025 ರ ವೇಳೆಗೆ ಸಮುದ್ರಕ್ಕೆ ತನ್ನಿಂದ ಸೇರುವ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ 70% ರಷ್ಟು ಕಡಿಮೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ.
ಇದು ಸುರಬಾಯಾ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಅದರ ಮೂಲಕ ಪ್ರಯಾಣಿಕರು ಪ್ರಯಾಣ ಟಿಕೆಟ್‌ಗಾಗಿ ಕಸವನ್ನು ವಿನಿಮಯ ಮಾಡಿಕೊಳ್ಳಬಹುದು. ಅಧಿಕಾರಿಗಳ ಪ್ರಕಾರ, ಈ ಯೋಜನೆಯು ಯಶಸ್ವಿಯಾಗಿದೆ, ಪ್ರತಿ ವಾರ ಸುಮಾರು 16,000 ಪ್ರಯಾಣಿಕರು ಉಚಿತ ಪ್ರಯಾಣಕ್ಕಾಗಿ ಕಸವನ್ನು ವಿನಿಮಯ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಗಂಟೆ ಅವಧಿಯ ಬಸ್ ಪ್ರಯಾಣಕ್ಕೆ ಮೂರು ದೊಡ್ಡ ಬಾಟಲಿಗಳು, ಐದು ಮಧ್ಯಮ ಬಾಟಲಿಗಳು ಅಥವಾ 10 ಪ್ಲಾಸ್ಟಿಕ್ ಕಪ್‌ಗಳು ವೆಚ್ಚವಾಗುತ್ತವೆ. ಆದರೆ ಅವುಗಳು ಸ್ವಚ್ಚವಾಗಿರಬೇಕು ಮತ್ತು ಹಾಳಾಗಿರಬಾರದು ಎಂದು ಸಂಸ್ಥೆ ತಿಳಿಸಿದೆ.
ಬೇರೆ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯೋಚಿಸಿದರೆ ಪರಿಸರವನ್ನು ಸ್ವಚ್ಚವಾಗಿಡಬಹುದು ಮತ್ತು ಸ್ವೀಕರಿಸಿದ ಬಾಟಲಿಗಳಿಂದ ರಸ್ತೆಗೆ ಉಕೃಷ್ಟವಾದ ಟಾರ್ ಹಾಕಬಹುದು ಮತ್ತು ಪ್ಲಾಸ್ಟಿಕ್ ಬಳಕೆ , ತ್ಯಾಜ್ಯ ಸಂಗ್ರಹ ಮತ್ತು ಅದರ ವಿಲೇವಾರಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ .
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ