ಇಸ್ಲಾಮಾಬಾದ್
ನೆರಯ ಪಾಕಿಸ್ತಾನದಲ್ಲಿ ಸದ್ಯ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಅರಾಜಕತೆ ನಿಗ್ರಹಿಸುವಲ್ಲಿ ವಿಫಲವಾಗಿರುವ ತೆಹ್ರಿಕ್ – ಇ -ಇನ್ಸಾಫ್ ಪಕ್ಷದ ಮುಖ್ಯಸ್ಥ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ದದ ಹೋರಾಟ ಒಂದು ನಿರ್ಣಾಯಕ ಹಂತ ಬಂದು ತಲುಪಿದ್ದು .”ಅವರಾಗಿಯೇ ರಾಜೀನಾಮೆ ನೀಡಿದರೆ ಸೂಕ್ತ, ಇಲ್ಲದಿದ್ದರೆ, ದೇಶದಲ್ಲಿ ಉಂಟಾಗುವ ಅರಾಜಕತೆ, ಅವ್ಯವಸ್ಥೆಗೆ ನಾವು ಹೊಣೆಗಾರರಲ್ಲ” ಎಂದು ಮೌಲಾನ ಫಹ್ಲೂರ್ ರೆಹಮಾನ್ ಎಚ್ಚರಿಕೆ ನೀಡಿದ್ದಾರೆ.
“ಭ್ರಷ್ಟಾಚಾರ ಎನ್ನುವುದು ಇಮ್ರಾನ್ ಖಾನ್ ಸರಕಾರದಲ್ಲಿ ತಾಂಡವಾಡುತ್ತಿದೆ. ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಇಮ್ರಾನ್ ಖಾನ್ ಗೆ ಇಲ್ಲ” ಎಂದು ಮೌಲಾನಾ ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.ಇಮ್ರಾನ್ ಖಾನ್ ಸರಕಾರವನ್ನು ಕಿತ್ತೊಗೆಯಲು ಸ್ವಾತಂತ್ರ್ಯ ಮೆರವಣಿಗೆ (ಆಜಾದಿ ಮಾರ್ಚ್) ರಾಜಧಾನಿ ಇಸ್ಲಾಮಾಬಾದ್ ಗೆ ಒಂದು ದಿನದ ಹಿಂದೆ ತಲುಪಿದ್ದು, ಇದು ಬೇರೆ ಬೇರೆ ಆಯಾಮಗಳಲ್ಲಿ ತಿರುವು ಪಡೆಯುವ ಸಾಧ್ಯತೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ