ಲಾಸ್ ಎಂಜಿಲೆಸ್ :
ಮುಂಬರುವ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾವಣೆಯಲ್ಲಿ ಭಾರತ ಮೂಲದ ಮೊದಲ ಜನ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲು ಯೋಚನೆ ನಡೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಭಾರತೀಯ ಮೂಲದ ಅಮೆರಿಕಾದ ಶ್ರೇಷ್ಠ ವೈದ್ಯ ಡಾ. ಸಂಪತ್ ಶಿವಾಂಗಿ 37 ವರ್ಷದ ತುಳಸಿ ಅವರನ್ನು ಪರಿಚಯಿಸಿ 2020ರಲ್ಲಿ ಇವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು. ಹಾವೈಲಿಯಿಂದ ಈಗಾಗಲೇ ನಾಲ್ಕು ಬಾರಿ ಗೆದ್ದಿರುವ ಕಾಂಗ್ರೆಸ್ ಮಹಿಳೆಯ ಉಪಸ್ಥಿತಿಯಲ್ಲಿ ಡೆಮಾಕ್ರಟಿಕ್ ಪಕ್ಷದ ತುಳಸಿ ಮಾತನಾಡಿದರು. ನಂತರದಲ್ಲಿ ಪತ್ರಕರ್ತರು 2020ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಕೇಳಿದ ಪ್ರಶ್ನೆಗಳಿಗೆ ಏನನ್ನೂ ತಿಳಿಸದೆ ಸುಮ್ಮನಾಗಿದ್ದಾರೆ ಎಂದು ಅಮೇರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
