ಸೆ. 23ರಂದು ಟ್ರಂಪ್ – ಇಮ್ರಾನ್ ಭೇಟಿ 

ಇಸ್ಲಾಮಾಬಾದ್

    ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸೆಪ್ಟಂಬರ್ 23ರಂದು ನ್ಯೂಯಾರ್ಕ್‌ನಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಡಾನ್ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.ವಿಶ್ವಸಂಸ್ಥೆಯ ಮಹಾ ಅಧಿವೇಶನ ದಲ್ಲಿ ಪಾಲ್ಗೊಳ್ಳಲು ಇಮ್ರಾನ್ ಖಾನ್ ಅಮೆರಿಕಕ್ಕೆ ತೆರಳಲಿದ್ದಾರೆ. ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಎರಡನೇ ಅಮೆರಿಕ ಪ್ರವಾಸವಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟಂಬರ್ 22ರಂದು ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಅದರ ಮರುದಿನ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗಲು ಸಮಯ ನಿಗದಿಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಹೂಸ್ಟನ್‌ನಲ್ಲಿ ಹಮ್ಮಿಕೊಂಡಿರುವ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ.ಇಮ್ರಾನ್ ಖಾನ್ ಅವರು ಮಹಾ ಅಧಿವೇಶನದಲ್ಲೂ, ಅಧ್ಯಕ್ಷರ ಭೇಟಿಯ ಸಂದರ್ಭದಲ್ಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಬಳಿಕ ಈ ಎರಡೂ ಅಣ್ವಸ್ತ್ರ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

    ಈ ವಾರದ ಆರಂಭದಲ್ಲಿ ಟ್ರಂಪ್ ಅವರು “ಅಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದೆ, ಸಾಕಷ್ಟು ಪ್ರಗತಿ ಇದೆ” ಎಂದು ಹೇಳಿದ್ದರು .ಪಾಕಿಸ್ತಾನ ಮತ್ತು ಭಾರತದ ಪ್ರಧಾನ ಮಂತ್ರಿಗಳು ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ಮಹಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಮೋದಿ ಅವರು ಮೊದಲು ಮಾತನಾಡಲಿದ್ದಾರೆ, ಪ್ರಧಾನಿ ಇಮ್ರಾನ್ ಖಾನ್ ಮಧ್ಯಾಹ್ನ ಮಾತನಾಡಲಿದ್ದಾರೆ.

   ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಬಗ್ಗೆ ಮೋದಿ ಪ್ರಸ್ತಾಪಿಸುವುದಿಲ್ಲ ಎಂದು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್‌ನ ಭಾರತೀಯ ರಾಜತಾಂತ್ರಿಕರು ಭಾರತೀಯ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಬದಲಾಗಿ, ಕಣಿವೆಯಲ್ಲಿ ಹಿಂಸಾಚಾರದ ಲಾಭ ಪಡೆಯಲು ಪಾಕಿಸ್ತಾನ ಉಗ್ರರನ್ನು ಅಲ್ಲಿಗೆ ಕಳುಹಿಸಬಹುದು ಎಂದು ನವದೆಹಲಿ ಪುನರುಚ್ಚರಿಸಲಿದೆ ಎಂದು ಡಾನ್ ವರದಿ ಮಾಡಿದೆ.

    ಬುಧವಾರ ಖಾನ್ ಅವರು ಕಾಶ್ಮೀರದಲ್ಲಿ ನಾಗರಿಕರ ವಿರುದ್ಧದ ಹಿಂಸಾಚಾರದ ವಿರುದ್ಧ ಎಚ್ಚರಿಕೆ ನೀಡಿದ್ದರು.ಪಾಕಿಸ್ತಾನದಿಂದ ಯಾರಾದರೂ ಭಾರತಕ್ಕೆ ಹೋಗಿ, ಕಾಶ್ಮೀರದಲ್ಲಿ ಹೋರಾಡುತ್ತಾರೆ ಎಂದು ಅವರು ಭಾವಿಸಿದರೆ ಅವರು ಕಾಶ್ಮೀರಿಗಳಿಗೆ ಕ್ರೌರ್ಯವೆಸಗುವ ಮೊದಲ ವ್ಯಕ್ತಿ ಅವರಾಗಿದ್ದಾರೆ. ಅವರು ನಿಜವಾಗಿ ಕಾಶ್ಮೀರಿಗಳ ಶತ್ರುಗಳು ಎಂದು ಖಾನ್ ಹೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap