ಲಾಸ್ ಏಂಜಲೀಸ್
ಅಮೆರಿಕದ ಭೂವೈಜ್ಞಾನಿಕ ಸಂಸ್ಥೆ ಸಮೀಕ್ಷೆಯ ಪ್ರಕಾರ ಶುಕ್ರವಾರ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.
ಸ್ಥಳೀಯ ಸಮಯ 3 ಗಂಟೆ 19 ನಿಮಿಷಕ್ಕೆ ಭೂಕಂಪ ಸಂಭವಿಸಿದೆ. ಲಾಸ್ ಏಂಜಲೀಸ್ ಉತ್ತರಕ್ಕೆ 272 ಕಿ.ಮೀ ದೂರದಲ್ಲಿರುವ ಕೆರ್ನ್ ಕೌಂಟಿಯ ರಿಡ್ಜರ್ಕ್ರೆಸ್ಟ್ ಕೇಂದ್ರಬಿಂದುವಾಗಿತ್ತು. ಸಮೀಪದ ಪ್ರದೇಶದಲ್ಲಿ ಗುರುವಾರ 6.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಕೆರ್ನ್ ಕೌಂಟಿ ಅಧಿಕಾರಿಗಳ ಪ್ರಕಾರ, ಕೌಂಟಿ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಕ್ರಿಯಗೊಳಿಸಿದೆ. 7.1 ತೀವ್ರತೆಯ ಭೂಕಂಪದ ನಂತರ ಸರಿಸುಮಾರು 1,800 ಜನ ವಿದ್ಯುತ್ ಸಂಪರ್ಕವಿಲ್ಲದೆ ಬದುಕುವಂತಾಗಿದೆ. ಅನಿಲ ಸೋರಿಕೆ, ಪ್ರಮುಖ ಕಟ್ಟಡ ಕುಸಿತದಂತಹ ಹಾನಿ ವರದಿಯಾಗಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1999ರಲ್ಲಿ ಕೊನೆಯ ಬಾರಿಗೆ ದೊಡ್ಡ ಪ್ರಮಣದ ಭೂಕಂಪನ ಸಂಭವಿಸಿದ್ದು, ಮೊಜಾವೆ ಮರುಭೂಮಿಯ ಹೆಕ್ಟರ್ ಗಣಿ ಪ್ರದೇಶದಲ್ಲಿ 7.1 ತೀವ್ರತೆಯ ಭೂಕಂಪನವಾಗಿತ್ತು. ಈ ಪ್ರದೇಶ ಲಾಸ್ ಏಂಜಲೀಸ್‍ನಿಂದ ದೂರವಿರುವುದರಿಂದ ಯಾವುದೇ ದೊಡ್ಡ ಹಾನಿಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
