ಅಮೇರಿಕ :
ಕೊರೊನಾವೈರಸ್ ರೋಗದ ವಿರುದ್ಧ ಹೋರಾಡಲು ವಿಶ್ವದ 25 ಬಡ ದೇಶಗಳಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ ತಕ್ಷಣ ಸಾಲ ಪರಿಹಾರವನ್ನು ಸೋಮವಾರ ಪ್ರಕಟಿಸಿದೆ.ಈ ನಿಧಿಯನ್ನು ಫಲಾನುಭವಿ ದೇಶಗಳು ಮುಂದಿನ ಆರು ತಿಂಗಳಲ್ಲಿ ತಮ್ಮ ದೇಶಗಳಿಗೆ ಅವಶ್ಯಕವಾಗಿರುವ ವೈದ್ಯಕೀಯ ಸೌಲಭ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐಎಂಎಫ್ ಮಂಡಳಿಯು ಬಹುತೇಕ ಎಲ್ಲಾ ಆಫ್ರಿಕಾದಲ್ಲಿನ ದೇಶಗಳು ಮತ್ತು ಅಫ್ಘಾನಿಸ್ತಾನ, ಯೆಮೆನ್, ನೇಪಾಳ ಮತ್ತು ಹೈಟಿ ದೇಶಗಳು ಸೇರಿದಂತೆ ಈ ನಿಧಿಯನ್ನು ಘೋಷಿಸಲಾಗಿದೆ.
ವಿಶ್ವಬ್ಯಾಂಕ್ ಈ ನಿಧಿಗೆ ತನ್ನ ಸಹಾಯವಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳು ಮೇ 1 ರಿಂದ ಜೂನ್ 2021 ರವರೆಗೆ ಬಡ ದೇಶಗಳಿಂದ ಸಾಲ ವಸೂಲಾತಿಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಕರೆ ನೀಡಿದೆ. ಪರಿಹಾರವನ್ನು ಐಎಂಎಫ್ನ ವಿಪತ್ತು ಕಂಟೈನ್ಮೆಂಟ್ ಮತ್ತು ರಿಲೀಫ್ ಟ್ರಸ್ಟ್ (ಸಿಸಿಆರ್ಟಿ) ನಿಂದ ನೀಡಲಾಗುವುದು ಎಂದು ತಿಳಿಸಲಾಗಿದೆ , ಇದು 2015 ರಲ್ಲಿ ಪಶ್ಚಿಮ ಆಫ್ರಿಕಾ ಎಬೋಲಾ ಎದುರಿಸಲು ಮೊದಲು ಸ್ಥಾಪಿಸಲ್ಪಟ್ಟಿತು ಅದ್ಯದ ಪರಿಸ್ಥಿತಿಯಲ್ಲಿ COVID-19 ಅನ್ನು ಎದುರಿಸಲು ದೇಶಗಳಿಗೆ ಸಹಾಯ ಮಾಡಲು ಮರುರೂಪಿಸಲಾಗಿದೆ.
ಪ್ರಸ್ತುತ ನಿಧಿಯಲ್ಲಿ 500 ಮಿಲಿಯನ್ ಡಾಲರ್ ಹೊಂದಿದ್ದು , ಜಪಾನ್, ಬ್ರಿಟನ್, ಚೀನಾ ಮತ್ತು ನೆದರ್ಲ್ಯಾಂಡ್ಸ್ ಇದರ ಪ್ರಮುಖ ಕೊಡುಗೆದಾರ ದೇಶವಾಗಿವೆ ಎಂದು ಐಎಂಎಫ್ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/im-175273.gif)