ವಾಷಿಂಗ್ಟನ್:
ವಿಶ್ವದ ಆರ್ಥಿಕತೆ ಮೇಲೆ ಕೊರೋನಾ ವೈರಸ್ ತೀವ್ರ ಪ್ರಭಾವ ಬೀರುತ್ತಿದ್ದು ಇದರ ಪರಿಣಾಮವಾಗಿ 2009ರಲ್ಲಿ ಇದ್ದ ಆರ್ಥಿಕ ಕುಸಿತಕ್ಕಿಂತಲ್ಲೂ ತೀವ್ರವಾಗಿದೆ. ಇದಕ್ಕೆ ತಕ್ಷಣದ ಪರಿಹಾರ ಅತ್ಯಗತ್ಯವಾಗಿ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.
ಜಿ 20 ದೇಶಗಳ ಹಣಕಾಸು ಸಚಿವರುಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ಶ್ರೀಮಂತ ರಾಷ್ಟ್ರಗಳು ಕಡಿಮೆ ಆದಾಯದ ದೇಶಗಳಿಗೆ ಹೆಚ್ಚಿನ ಬೆಂಬಲವನ್ನು ನೀಡಬೇಕು. 1 ಟ್ರಿಲಿಯನ್ ಸಾಲ ಸಾಮರ್ಥ್ಯವನ್ನು ನಿಯೋಜಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಿದ್ದವಾಗಿದೆ ಎಂದರು.
2020ರ ಜಾಗತಿಕ ಬೆಳವಣಿಗೆ ಋಣಾತ್ಮಕವಾಗಿದ್ದು ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭಕ್ಕಿಂತಲೂ ಈಗ ಪರಿಸ್ಥಿತಿ ಹದಗೆಟ್ಟಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ