ಬರ್ನ್:
ಸದ್ಯ ಭಾರತದ ಮಟ್ಟಿಗೆ ಮರಿಚಿಕೆಯಾಗಿದ್ದ ಭಾರತದ ಕಾಳಧನಿಕರ ಸ್ವಿಸ್ ಖಾತೆಯ ವಿವರಗಳು ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದ್ದು ದೇಶದ ಆಗರ್ಭ ಶ್ರೀಮಂತರಲ್ಲಿ ಸಣ್ಣ ನಡುಕ ಹುಟ್ಟಿಸಿದೆ ಎನ್ನಲಾಗಿದೆ . ಆದರೆ ಸದ್ಯದ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ ನೀಡುತ್ತಿರುವ ಮಾಹಿತಿಯಲ್ಲಿ ಬಹುತೇಕ ಎಲ್ಲಾ ಖಾತೆಗಳು 2018ಕ್ಕೂ ಮೊದಲೇ ಮುಚ್ಚಲ್ಪಟ್ಟಿವೆ ಎಂದು ಬ್ಯಾಂಕ್ ತಿಳಿಸಿದೆ.
ಸ್ವಿಟ್ಜರ್ಲೆಂಡ್ ಮೂಲದ ಎಲ್ಲಾ ಬ್ಯಾಂಕುಗಳು ಸ್ವಿಸ್ ಸರ್ಕಾರದ ನಿರ್ದೇಶನದ ಮೇರೆಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಲು ಸಿದ್ಧಪಡಿಸಿದ ದತ್ತಾಂಶವು ಒಂದೇ ಒಂದು ದಿನ ಸಕ್ರಿಯವಾಗಿದ್ದ ಖಾತೆಗಳ ವಿವರ ಮತ್ತು ಹಣ ವಿನಿಮಯದ ಸಂಪೂರ್ಣ ವಿವರಗಳನ್ನು ಬ್ಯಾಂಕುಗಳು ಒದಗಿಸಲಿವೆ ಎಂದು ಸ್ವಿಸ್ ಸರ್ಕಾರ ತಿಳಿಸಿದೆ.
ಸದ್ಯ ರವಾನೆಯಾಗಲಿರುವ ಮಾಹಿತಿಯೂ ಖಾತೆಗಳಲ್ಲಿ ಇದ್ದ ಲೆಕ್ಕಕ್ಕೆ ಬಾರದ ಕ್ರಮ ಹಣವಾಗಿರಬಹುದು ಅದನ್ನು ಹೊಂದಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ದತ್ತಾಂಶವು ಸಾಕಷ್ಟು ಉಪಯುಕ್ತವಾಗಿಲಿದೆ ಎಂದು ಬ್ಯಾಂಕ್ ಗಳು ಅಭಿಪ್ರಾಯಪಟ್ಟಿವೆ.ಏಕೆಂದರೆ ಇದರಲ್ಲಿ ಠೇವಣಿ ಮತ್ತು ವರ್ಗಾವಣೆಯ ಸಂಪೂರ್ಣ ವಿವರಗಳನ್ನು ಬ್ಯಾಂಕುಗಳು ಒದಗಿಸಲಿವೆ ಮತ್ತು ಸೆಕ್ಯುರಿಟೀಸ್ ಮತ್ತು ಇತರ ವರ್ಗಗಳಲ್ಲಿನ ಹೂಡಿಕೆಗಳು ಸೇರಿದಂತೆ ಎಲ್ಲಾ ಹೂಡಿಕೆ ವಿವರಗಳನ್ನು ಒದಗಿಸಲು ಬ್ಯಾಂಕುಗಳು ಮುಂದಾಗಿವೆ.
ಅನಾಮಧೇಯತೆಯ ಷರತ್ತಿನ ಮೇಲೆ, ಹಲವಾರು ಬ್ಯಾಂಕರ್ಗಳು ಮತ್ತು ಅಧಿಕಾರಿಗಳು ಹಂಚಿಕೊಂಡಿರುವ ವಿವರಗಳು ಹೆಚ್ಚಾಗಿ ಉದ್ಯಮಿಗಳಿಗೆ ಸಂಬಂಧಿಸಿವೆ ಎಂದು ತಿಳಿಸಿದ್ದಾರೆ, ಅನಿವಾಸಿ ಭಾರತೀಯರು , ಹಲವಾರು ಆಗ್ನೇಯ ಏಷ್ಯಾ, ಯುಎಸ್, ಯುಕೆ ಮತ್ತು ಕೆಲವು ಆಫ್ರಿಕನ್ ಮತ್ತು ದಕ್ಷಿಣ ಅಮೆರಿಕನ್ನರ ಖಾತೆಗಳೂ ಸಹ ಇಲ್ಲಿವೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








