ಹೈದರಾಬಾದ್‌ ಹುಡುಗನ ಬಗ್ಗೆ ಏನಂತಾರೆ ನಿವೇದಿತಾ …..?

ಬೆಂಗಳೂರು

    ಕಿರುತೆರೆಯಲ್ಲಿ ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ. ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್​ ಪಡೆಯುತ್ತಿದ್ದಂತೆ ನಿವೇದಿತಾ ಗೌಡ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿದ್ದು, ಹೈದ್ರಾಬಾದ್ ಹುಡುಗನ ಜೊತೆ ಸ್ನೇಹ ಎನ್ನುವ ಆರೋಪ ಕೇಳಿ ಬಂದಿತ್ತು.

    ಈ ಆರೋಪಕ್ಕೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಹೆಸರು ಹೇಳದೇ ಆಕ್ರೋಶ ಹೊರ ಹಾಕಿದ್ದಾರೆ.

    ಈ ಬಗ್ಗೆ ಮಾತನಾಡಿದ ನಿವೇದಿತಾ ಗೌಡ , ಆ ಮನುಷ್ಯ ಹೇಳಿದಂತೆ ನಾನು ಯಾವುದೋ ತೆಲುಗು ಡೈರೆಕ್ಟರ್ ಹಿಂದೆ ಹೋಗಿದ್ದೀನಿ ಎಂದು ಏನೇನೋ ಹೇಳಿದ್ದಾರೆ. ಅದೆಲ್ಲ ಸತ್ಯವಲ್ಲ. ನಿಜವಾಗಲೂ ನಾವು ಟ್ಯಾಲೆಂಟೆಡ್ ಆಗಿದ್ದರೇ ಅವಕಾಶ ಅದಾಗೆ ಅದು ಹುಡುಕಿ ಬರುತ್ತದೆ. ಮದುವೆಯಿಂದ ನನಗೆ ಏನೂ ಆಗಿಲ್ಲ.

    ಮದುವೆಯಾದ ಮೇಲೂ ನಾನು ಬ್ಯಾಕ್‌ ಟು ಬ್ಯಾಕ್‌ ಶೋಗಳನ್ನು ಮಾಡುತ್ತಿದ್ದೇನೆ. ಕರಿಯರ್​ಗೆ ನಮ್ಮ ಮದುವೆ ಅಡ್ಡಿಯಾಗಿಲ್ಲ. ಮದುವೆ ಆದ ಮೇಲೂ ನನ್ನ ಕರಿಯರ್ ಗ್ರೋತ್‌ ಅಲ್ಲೇ ಇತ್ತು. ಮದುವೆಯಾದ ಮೇಲೆಯೇ ನಾವು ಇನ್ನಷ್ಟು ಚೆನ್ನಾಗಿ ಬೆಳೆದಿದ್ದೇವೆ. ಆ ವ್ಯಕ್ತಿ ಸುಳ್ಳು ಹೇಳುವ ಕಾನ್ಫಿಡೆನ್ಸ್‌ ನೋಡಿ ನನಗೆ ತಲೆ ಕೆಟ್ಟು ಹೋಯ್ತು. ಒಬ್ಬ ವ್ಯಕ್ತಿ ಹಿಂಗೂ ಯೋಚನೆ ಮಾಡಬಹುದಾ ಅನಿಸಿತು. ಆದರೆ ಆ ರೀತಿ ಏನೂ ಇಲ್ಲ. ಬೇರೆ ವ್ಯಕ್ತಿ ಜೊತೆ ಲಿಂಕ್ ಮಾಡಿ, ಅವರ ಜೊತೆ ಫಾರೀನ್​ಗೆ ಹೋಗಿ ಇದೆಲ್ಲ ಸುದ್ಧ ಸುಳ್ಳು ಎಂದು ನಿವೇದಿತಾ ಗೌಡ ಸ್ಪಷ್ಟನೆ ನೀಡಿದ್ದಾರೆ.

    ಇನ್ನು ಈ ಬಗ್ಗೆ ಚಂದನ್ ಶೆಟ್ಟಿ ಕೂಡ ಮಾತನಾಡಿದ್ದು, ಇನ್ನೊಬ್ಬ ವ್ಯಕ್ತಿ ಸಂದರ್ಶನ ಕೊಟ್ಟಿರುವುದು ನೋಡಿದೆ. ಅವರು ನನ್ನ ಕ್ಲೋಸ್ ಫ್ರೆಂಡ್ ಅಂತ ಬಿಂಬಿಸುತ್ತಿದ್ದಾರೆ. ಆ ರೀತಿ ಯಾವುದು ಇಲ್ಲ. ಅವರು ಹೇಳಿದಂತ ಮಾತುಗಳನ್ನು ಕೇಳಿ ನನಗೆ ಒಂದು ನಿಮಿಷ ಶಾಕ್ ಆಯಿತು. ಯಾಕೆ ಈ ರೀತಿ ಸುಳ್ಳು ಹೇಳುತ್ತಿದ್ದರಲ್ಲ ಅನಿಸಿತು. 6 ತಿಂಗಳು ಹಿಂದೆ ನನಗೆ ಸಿಕ್ಕಾಗ ಹೇಳಿದರು ಅಂತ ಹೇಳಿದ್ದು ಸುಳ್ಳು. ನಿವೇದಿತಾ ಅವರಿಗೆ ಹೈದರಾಬಾದ್​ನಲ್ಲಿ ಒಂದು ಹುಡುಗನ ಜೊತೆ ಸಂಬಂಧ ಇದೆ ಅಂತ. ಅವರು ಯಾಕೆ ಹೈದರಾಬಾದ್​ಗೆ ಹೋಗ್ತಾರೆ ಎಂದು ಹೇಳಿದ್ದಾರೆ ಎಂದಿದ್ದಾರೆ. ಆದರೆ ಈ ರೀತಿಯಾದ ಯಾವುದೇ ಮಾತು ನಮ್ಮಿಬ್ಬರ ಮಧ್ಯೆ ನಡೆದಿಲ್ಲ. ಅವರು ಹೇಳಿದ್ದೆಲ್ಲ ಸುಳ್ಳು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link