ನವದೆಹಲಿ:
ರಕ್ಷಣಾ ವಲಯದಲ್ಲಿ ಕೇಂದ್ರ ಸರ್ಕಾರ ತಂದಿರುವ ಮೇಕ್ ಇನ್ ಇಂಡಿಯಾ ವ್ಯವಸ್ಥೆಯಲ್ಲಿ ತಯಾರಾಗುತ್ತಿರುವ ಮಿಲಿಟರಿ ಸಂಬಂಧಿತ ಸಲಕರಣೆಗಳಿಗೆ ವಿದೇಶಗಿಳಿಂದ ಬೇಡಿಕೆ ಬರಲು ಶುರುವಾಗಿದೆ.ಇದರ ಭಾಗವಾಗಿ ತನ್ನ ಮಿತ್ರ ರಾಷ್ಟ್ರವಾದ ರಷ್ಯಾದ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತ ಬರೊಬ್ಬರಿ 40 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದವನ್ನು ಗಿಟ್ಟಿಸಿಕೊಂಡಿದೆ . ದೇಶಿಯವಾಗಿ ಡಿಆರ್ ಡಿಒ ಹಾಗೂ ಬಿಇಎಲ್ ಸಂಸ್ಥೆಗಳು ತಯಾರಿಸಿರುವ ವೆಪನ್ ಲೊಕೇಟಿಂಗ್ ರಡಾರ್ (ಶಸ್ತ್ರಾಸ್ತ್ರ ಪತ್ತೆ ರೆಡಾರ್) ಗಳನ್ನು ಅರ್ಮೇನಿಯಾಗೆ ರಫ್ತು ಮಾಡಲ್ಪಿದೆ.
ಸ್ವಾತಿ ರಡಾರ್ ಗಳನ್ನು ಅರ್ಮೇನಿಯಾಗೆ ರಫ್ತು ಮಾಡುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಇದನ್ನು ಮೇಕ್ ಇನ್ ಇಂಡಿಯಾದ ಬಹುದೊಡ್ಡ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ. ಅರ್ಮೇನಿಯನ್ನರು ರಷ್ಯಾ ಹಾಗೂ ಪೋಲ್ಯಾಂಡ್ ನ ರಡಾರ್ ಗಳನ್ನು ಪರೀಕ್ಷಿಸಿದ್ದರು. ಆದರೆ ಅಂತಿಮವಾಗಿ ಭಾರತೀಯ ರಡಾರ್ ಗಳನ್ನು ಖರೀದಿಸಲು ಮುಂದಾಗಿದ್ದಾರೆ.
