ಪ್ಯಾರಿಸ್ :
ವಿಶ್ವದ ಪ್ರಸಿದ್ದ ಮತ್ತು ಅತಿ ದಕ್ಷತೆಯ ಪೊಲೀಸ್ ಇಲಾಖೆಯಾದ ಇಂಟರ್ ಪೋಲ್ ಗೆ ನೂತನ ಮುಖ್ಯಸ್ಥ ರಾಗಿ ದಕ್ಷಿಣ ಕೊರಿಯಾದ ನವೃತ್ತ ಪೊಲೀಸ್ ಅಧಿಕಾರಿ ಹಾಗು ಹಾಲಿ ಇಂಟರ್ ಉಪಮುಖ್ಯಸ್ಥರಾಗಿರುವ ಕಿಮ್ ಜಾಂಗ್ ಯಾಂಗ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಿಮ್ ಅವರು ತಮ್ಮ ರಾಷ್ಟ್ರದ ಪೊಲೀಸ್ ಇಲಾಖೆಯಲ್ಲಿ ಬುಲ್ ಡೋಝರ್ ಎಂದೇ ಖ್ಯಾತರಾಗಿದ್ದಾರೆ ಅಲ್ಲಿನ ಪೊಲೀಸ್ ವಿಶ್ವವಿಧ್ಯಾಲಯದ ಪ್ರಾಧ್ಯಾಪಕರು ಹೇಳುವಂತೆ ಆತನಿಗೆ ಬೇಕಾದುದ್ದನ್ನು ಏನೇ ಆದರು ಪಡೆದು ಕೊಳ್ಳುವ ಛಲ ಅವರಲ್ಲಿದೇ ಮತ್ತು ಈಗಿರುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
