ವಾಷಿಂಗ್ಟನ್:
ಇರಾನ್ ಮೇಲೆ ದಾಳಿ ಮಾಡಿ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು ಹತ್ಯೆ ಮಾಡಿದ ಅಮೆರಿಕಾ ವಿರುದ್ಧ ಇರಾನ್ ನೇರವಾಗಿ ಅಮೇರಿಕಾದ ನರಮಂಡಲವಾದ ಅಂತರ್ಜಾಲವನ್ನು ಕೆದಕಿ ಘಾಸಿಗೊಳಿಸುವ ಕೆಲಸಕ್ಕೆ ಇರಾನ್ ಕೈ ಹಾಕಿದೆಯೇ ಎಂಬ ಅನುಮಾದಿಂದ ಅಮೇರಿಕ ಅಕ್ಷರಶಹ ತತ್ತರಿಸಿದೆ.
ಇರಾನ್ ಸದ್ಯ ಅಮೆರಿಕದ ಮೇಲೆ ಸೈಬರ್ ಸಮರ ಸೇರಿ ವಿವಿಧ ರೀತಿಯ ದಾಳಿಗಳನ್ನು ಇರಾನ್ ನಡೆಸಬಹುದು ಎಂಬ ಊಹೆ ಇದೀಗ ನಿಜವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದ ವೆಬ್ ಸೈಟ್ ವೊಂದನ್ನು ಇರಾನ್ ಹ್ಯಾಕ್ ಮಾಡಿರುವ ಘಟನೆ ವರದಿಯಾಗಿದೆ.
ಫೆಡರಲ್ ಡಿಪಾಸಿಟರಿ ಲೈಬ್ರರಿ ಪ್ರೋಗ್ರಾಮ್ ಎಂಬ ವೆಬ್ ಸೈಟ್ ಅನ್ನು ಶನಿವಾರ ಹ್ಯಾಕ್ ಮಾಡಲಾಗಿದೆ. ದೇವರ ಹೆಸರಿನಲ್ಲಿ ಇರಾನ್ ಸೈಬರ್ ಸೆಕ್ಯುರಿಟಿ ಗ್ರೂಪ್ ಹ್ಯಾಕರ್ ಸಂಸ್ಥೆ ಈ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದೆ. ಇದು ಇರಾನ್ ಸೈಬರ್ ಸಾಮರ್ಥ್ಯದ ಸಣ್ಣ ಭಾಗ. ನಾವು ಯಾವಾಗಲು ಯಾವ ಸವಾಲಿಗಾದರು ಸಿದ್ಧವಾಗಿದ್ದೇವೆಂಬ ಸಾಲಗಳುನ್ನು ಬರೆಯಲಾಗಿದೆ.
