ಮಲಾಲಾಗೆ ವಿಶ್ವಸಂಸ್ಥೆಯಿಂದ ಮತ್ತೊಂದು ಗೌರವ..!

ನ್ಯೂಯಾರ್ಕ್:

    ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾದ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಪಾಕಿಸ್ತಾನದ ಕಿರಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸಫ್ ಝೈ ಅವರಿಗೆ ವಿಶ್ವಸಂಸ್ಥೆ ಮತ್ತೊಂದು ಮಹತ್ವದ ಗೌರವ ನೀಡಿದೆ.

    ಜಗತ್ ಪ್ರಸಿದ್ದ ಟೀನೆಜ್ ಯುವತಿಯೆಂದು ಮಲಾಲಾ ಪರಿಗಣಿಸಿದೆ 21 ನೇ ಶತಮಾನದ ಎರಡನೇ ದಶಕದಲ್ಲಿ, ಪ್ರಸಿದ್ದ ಟೀನೇಜರ್ ಆಗಿ ಮಲಾಲಾ ಆಯ್ಕೆಯಾಗಿದ್ದು, 2010 ರಿಂದ 2019 ರ ಮಧ್ಯ ಕಾಲದಲ್ಲಿ ಮಲಾಲಾ ಗೆ ದೊರೆತ ಮಾನ್ಯತೆ ಆಧಾರದ ಮೇಲೆ ವಿಶ್ವಸಂಸ್ಥೆ ಈ ಗೌರವವನ್ನು ನೀಡಿದೆ ಎನ್ನಲಾಗಿದೆ.

    ಈ ಸಂಬಂಧ ವಿಶ್ವಸಂಸ್ಥೆ ಗುರುವಾರ ಹೇಳಿಕೆ ನೀಡಿದೆ. ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಮಲಾಲಾ ನಡೆಸಿರುವ ಹೋರಾಟವನ್ನುವಿಶ್ವಸಂಸ್ಥೆ ಶ್ಲಾಗಿಸಿದೆ . ಸಣ್ಣ ವಯಸ್ಸಿನಿಂದಲೂ ಮಲಾಲಾ ಬಾಲಕಿಯರ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ ಮತ್ತು ತಾಲಿಬಾನ್ ಉಗ್ರರ ವಿರುದ್ಧ ಹೋರಾಡಿದ್ದಾರೆ. ಈ ಪ್ರಯತ್ನಗಳಿಗಾಗಿ ಆಕೆಗೆ 2014 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ, 2017 ರಲ್ಲಿ ವಿಶ್ವಸಂಸ್ಥೆ ಕಿರಿಯ ಶಾಂತಿದೂತೆ ಎಂದೂ ಕರೆಯಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link