ಬೀಜಿಂಗ್; 

ಕಳೆದ ತಿಂಗಳು 29 ರಂದು ಇದ್ದಕಿದ್ದಂತೆ ನಾಪತ್ತೆಯಾಗಿದ್ದ ಇಂಟರ್ ಪೋಲ್ ನ ಮುಖ್ಯಸ್ಥ ಮೆಂಗ್ ಹಾಂಗ್ ವೈ ಎಲ್ಲಿ ಎಂದು ಇಡೀ ಫ್ರಾನ್ಸ್ ಹುಡುಕುತ್ತಿದ್ದರೆ ಚೀನಾ ಪೊಲೀಸರು ಅವರು ನಮ್ಮ ವಶದಲ್ಲಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಹಿನ್ನಲೆ :
ಸೆ.29 ರಂದು ರಜೆಗಾಗಿ ಸ್ವದೇಶಕ್ಕೆ ಹೋದವರು ಈವರೆಗೂ ಫ್ರಾನ್ಸ್’ಗೆ ಮರಳಿ ಬಂದಿಲ್ಲ. ಈ ಹಿನ್ನಲೆ ಅವರ ಪತ್ತೆಗಾಗಿ ಫ್ರಾನ್ಸ್ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಈ ನಡುವೆ, ಹಾಂಕಾಂಗ್’ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಪ್ರಕಟಿಸಿದ್ದು, ‘ಹಳೆಯ ಪ್ರಕರಣವೊಂದರ ತನಿಖೆ ಸಂಬಂಧ ಮೆಂಗ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಚೀನಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅವರು ಚೀನಾಗೆ ಬಂದಿಳಿಯುತ್ತಿದ್ದಂತೆಯೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಆದರೆ, ಅವರು ಎಲ್ಲಿದ್ದಾರೆಂಬ ಬಗ್ಗೆ ತಿಳಿದುಬಂದಿಲ್ಲ.ಈ ವರದಿಗಳ ಬೆನ್ನಲ್ಲೇ, ತನ್ನ ಮುಖ್ಯಸ್ಥರ ಬಗ್ಗೆ ಇಂಟರ್ ಪೋಲ್, ಚೀನಾ ಸಂರ್ಕಾರದಿಂದ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
