ವಾಷಿಂಗ್ ಟನ್: 

ವಿಶ್ವಸಂಸ್ಥೆ ಸಹವಾಸವೇ ಬೇಡ ಎಂದು ಹೇಳುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ದೊಡ್ಡ ಶಾಕ್ ಒಂದು ಎದುರಾಗಿದೆ ವಿಶ್ವ ಸಂಸ್ಥೆಯಲ್ಲಿ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಮೆರಿಕಾದ ಅಧ್ಯಕ್ಷರ ಕಚೇರಿಗೆ ರಾಜೀನಾಮೆ ಪತ್ರವನ್ನು ನಿಕ್ಕಿ ಹ್ಯಾಲೆ ಸಲ್ಲಿಸಿದ್ದು, ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹಾಗೂ ಸಚಿವ ಮೈಕ್ ಪೊಂಪೀ ಅವರಿಗೆ ಅಚ್ಚರಿ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದ್ದು, ನಿಕ್ಕಿ ಹ್ಯಾಲೆ ಅವರನ್ನು ನನ್ನ ಸ್ನೇಹಿತೆ ಎಂದು ಹೇಳಿದ್ದಾರೆ . ರಾಯಭಾರಿಯಾಗಿರುವ ನನ್ನ ಸ್ನೇಹಿತೆ ನಿಕ್ಕಿ ಹ್ಯಾಲೆ ಅಚ್ಚರಿಯ ಘೋಷಣೆ ಮಾಡಿದ್ದಾರೆ ಎಂದು ಅವರ ಚ್ಚರಿಯನ್ನು ಹಂಚಿಕೊಂಡಿದ್ದಾರೆ.
Big announcement with my friend Ambassador Nikki Haley in the Oval Office at 10:30am.
— Donald J. Trump (@realDonaldTrump) October 9, 2018
ನಿಕ್ಕಿ ಹ್ಯಾಲೆ ಅವರ ರಾಜೀನಾಮೆ ಪತ್ರ :

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








