ಪ್ಯಾರಿಸ್:
ಐತಿಹಾಸಿಕ ಕಟ್ಟಡಗಳ ನಗರಗಳಲ್ಲಿ ಒಂದಾದ ಪ್ಯಾರಿಸ್ನ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ಬೆಂಕಿ ಅವಘಡದ ಪರಿಣಾಮವಾಗಿ ಕಟ್ಟಡದ ಕೆಲ ಪ್ರಮುಖ ಭಾಗಗಳು ಕುಸಿದು ಬಿದ್ದಿವೆ ಎಂದು ತಿಲಿದು ಬಂದಿದೆ .
ಮೂಲಗಳ ಪ್ರಕಾರ ಈ ಕಟ್ಟಡದ ನವೀಕರಣ ಕೆಲಸಗಳು ನಡೆಯುತ್ತಿದ್ದವು. ಈ ವೇಳೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಎಲ್ಲಡೆ ಹಬ್ಬಿ ಕಟ್ಟಡದ ಪ್ರಮುಖ ಭಾಗಗಳು ನೆಲಕ್ಕುರುಳಿದವು. ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ಬೆಂಕಿಯನ್ನು ನಿಯಂತ್ರಣ ಮಾಡುವುದು ಕಷ್ಟದ ಕೆಲಸ. ಆದರೂ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಕಟ್ಟಡ ಬೆಂಕಿಗೆ ಆಹುತಿಯಾಗುವುದನ್ನು ನಾಗರೀಕರೊಬ್ಬರು ತಮ್ಮ ಟ್ವಿಟ್ಟರೆ್ ನಲ್ಲಿ ಹಾಕಿದ್ದಾರೆ.
#NotreDame right now. I feel sick pic.twitter.com/UFqsSrtwGu
— Patrick Galey (@patrickgaley) April 15, 2019