ನಿಕ್ಕಿ ಕೊಲೆ ಪ್ರಕರಣ : ಕೊಲೆಗೆ ಸಹಾಯ ಮಾಡಿದ್ದ ಸಾಹಿಲ್‌ ತಂದೆ ಬಂಧನ.

ನವದೆಹಲಿ 

     ಕೆಲದಿನಗಳಿಂದ ಸುದ್ದಿಯಲ್ಲಿರುವ ನಿಕ್ಕಿ ಯಾದವ್ ಸಾವಿನ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಲಿವ್ ಇನ್ ಸಂಗಾತಿ ನಿಕ್ಕಿಯನ್ನು ಸಾಹಿಲ್ ಎಂಬಾತ ಹತ್ಯೆ ಮಾಡಿ ತನ್ನ ಕುಟುಂಬ ಒಡೆತನದ ರೆಸ್ಟೊರೆಂಟ್‌ನ ಫ್ರಿಡ್ಜ್‌ನಲ್ಲಿ ಯುವತಿಯ ಶವವನ್ನು ಇರಿಸಿದ್ದನು. ಈ ಹತ್ಯೆಯಲ್ಲಿ ಸಾಹಿಲ್‌ಗೆ ತಂದೆ ಸಾಥ್ ನೀಡಿದ್ದ ಎನ್ನು ಆಘಾತಕಾರಿ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ತನ್ನ ಮಗನಿಗೆ ಕೊಲೆ ಮಾಡಲು ಸಹಾಯ  ಸಾಹಿಲ್ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 23 ವರ್ಷದ ನಿಕ್ಕಿ ಯಾದವ್ ಅನ್ನು ಕೆಲ ದಿನಗಳ ಹಿಂದೆ ಆಕೆಯ ಸಂಗಾತಿ ಸಾಹಿಲ್ ಗೆಹ್ಲೋಟ್ ಚಾರ್ಜಿಂಗ್ ಕೇಬಲ್‌ನಿಂದ ಕತ್ತು ಹಿಸುಕಿ ಕೊಂದನು. ಮಂಗಳವಾರ ದೇಶದಲ್ಲಿ ಅನೇಕರು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾಗ ಪೊಲೀಸರು ನಿಕ್ಕಿ ಯಾದವ್ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಸಾಹಿಲ್ ಗೆಹ್ಲೋಟ್ ಅವರ ತಂದೆಯೊಂದಿಗೆ, ಕೊಲೆಗೆ ಯೋಜನೆ ರೂಪಿಸಲು ಸಹಾಯ ಮಾಡಿದ ಇತರ ಮೂವರು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

     “ದೆಹಲಿ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ. ಪಿತೂರಿಯಲ್ಲಿ ಸಹಾಯ ಮಾಡಿದ ಆರೋಪದ ಮೇಲೆ ಸಾಹಿಲ್ ಗೆಹ್ಲೋಟ್ ಅವರ ತಂದೆಯನ್ನೂ ಬಂಧಿಸಲಾಗಿದೆ” ಎಂದು ವಿಶೇಷ ಸಿಪಿ ರವೀಂದರ್ ಯಾದವ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap