ಸ್ಟೇ ಹೋಂ ನಿಯಮ ಉಲ್ಲಂಘನೆ : ಓರ್ವ ಭಾರತೀಯನಿಗೆ ಜೈಲು

ಸಿಂಗಾಪುರ

     ಸ್ಟೇ- ಹೋಮ್ ನೋಟಿಸ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಮೂಲದ ಯುವಕನೊರ್ವನಿಗೆ ಆರು ವಾರಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ಸಿಂಗಾಪುರದ ನ್ಯಾಯಾಲಯವೊಂದು ಬುಧವಾರ ತೀರ್ಪು ಪ್ರಕಟಿಸಿದೆ.ಖುರೇಶ್ ಸಿಂಗ್ ಸಂಧು ಜೈಲುಶಿಕ್ಷೆಗೊಳಗಾದ ಯುವಕ.ವೃತ್ತಿಯಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಖುರೇಶ್ ಸಿಂಗ್, ಮಾರ್ಚ್ 17 ರಂದು ಇಂಡೊನೇಷ್ಯಾದ ಬಾಟಮ್ ನಿಂದ ಸಿಂಗಾಪುರಕ್ಕೆ ವಾಪಸ್ಸಾಗಿದ್ದಾನೆ. ಹಾಗಾಗೀ ಮಾರ್ಚ್ 17ರಿಂದ ಮಾರ್ಚ್ 31ರ ನಡುವೆ ಆತ ಮನೆಯಲ್ಲಿಯೇ ಇರಬೇಕಾಗಿತ್ತು. 

    ಆತ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದು,ಇತರರೊಂದಿಗೆ ಕೊಠಡಿಯನ್ನು ಹಂಚಿಕೊಳ್ಳುವ ಮೂಲಕ ಸ್ಟೇ- ಹೋಮ್ ನೋಟಿಸ್ ನಿಯಮ ಉಲ್ಲಂಘಿಸಿದ್ದಾನೆ ಎಂದು ನ್ಯೂಸ್ ಏಷ್ಯಾ ಚಾನೆಲ್ ವರದಿ ಮಾಡಿದೆ.

    ನೋಟಿಸ್ ನಿಯಮಗಳನ್ನು ಅರ್ಥ ಮಾಡಿಕೊಂಡಿದ್ದು, ಯಾವಾಗಲೂ ಮನೆಯಿಂದ ಹೊರಗೆ ಹೋಗಲ್ಲ ಎಂದು ಸ್ವೀಕೃತಿಗೆ ಸಹಿ ಮಾಡಿದ್ದಾನೆ. ಆದಾಗ್ಯೂ, ವಲಸಿಗರ ತಪಾಸಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ  ಕ್ಯಾಸಿನೊ ಹೋಟೆಲ್ ರೆಸಾರ್ಟ್ ವೊಂದಕ್ಕೆ ತೆರಳಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಆರಂಭಿಸಿದ್ದಾನೆ. 

    ತನ್ನ ಪಾಳಿ ಮುಗಿದ ನಂತರ ಮಾರನೇ ದಿನ ರೈಲು ಮೂಲಕ ತನ್ನ ಮನೆಗೆ ತೆರಳಿದ್ದಾನೆ.  ಅಲ್ಲಿ ಮೂವರು ಇತರ ಸಹೋದ್ಯೋಗಿಗಳೊಂದಿಗೆ ಕಾಲ ಕಳೆದಿದ್ದಾನೆ. ಹೋಮ್- ಸ್ಟೇ ನೋಟಿಸ್ ಬಗ್ಗೆ ಇತರ ಸಹೋದ್ಯೋಗಿಗಳಿಗೆ ಆತ ಬಾಯ್ಬಿಟ್ಟಿಲ್ಲ. ಮುಂದೆ ಮೂರು ದಿನಗಳ ಕಾಲ ಇದೇ ರೀತಿಯ ಕೆಲಸ ಮಾಡಿದ್ದು, ತನ್ನ ಸ್ನೇಹಿತರೊಂದಿಗೆ ಕೊಠಡಿಯಲ್ಲಿ ಉಳಿದುಕೊಂಡಿದ್ದಾನೆ.

    ಮಾರ್ಚ್ 21ರಂದು ಸಂಧುವಿಗೆ ನೀಡಲಾಗಿರುವ ಹೋಮ್- ಸ್ಟೇ- ನೋಟಿಸ್ ಮೇಲ್ವಿಚಾರಕರ ಗಮನಕ್ಕೆ ಬಂದಿದ್ದು, ಕೂಡಲೇ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಈ ಮಧ್ಯೆ ಚೆಕ್ ಪಾಯಿಂಟ್  ಅಧಿಕಾರಿಗಳು ಆತ ಹೇಳಿದ್ದ ಮನೆಯಲ್ಲಿ ಹುಡುಕಾಟ ನಡೆಸಿದಾಗ ಅಲ್ಲಿ ಆತ ಇಲ್ಲದಿರುವುದು ಕಂಡುಬಂದಿದೆ. ನಂತರ ಪ್ರಕರಣ ದಾಖಲಿಸಲಾಗಿದ್ದು, ಆರು ವಾರಗಳ ಜೈಲು ಶಿಕ್ಷೆಯೊಂದಿಗೆ 10 ಸಾವಿರ ಎಸ್ ಜಿಡಿಯಷ್ಟು ದಂಡ ವಿಧಿಸಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap