ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ನರೇಂದ್ರ ರಂಗಪ್ಪ?

ಬೆಂಗಳೂರು

    ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೂಳೆಶಾಸ್ತ್ರ  ತಜ್ಞ (ಆರ್ಥೋಪೆಡಿಕ್ ಸರ್ಜನ್) ಡಾ.ನರೇಂದ್ರ ರಂಗಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ರಾಜ್ಯ ಬಿಜೆಪಿ ಗಂಭೀರವಾಗಿ ಚಿಂತನೆ ನಡೆಸಿದೆ.

    ಮಾಜಿ ಸಚಿವ ಅರವಿಂದ ಲಿಂಬಾವಳಿ ಕಳೆದ ನಾಲ್ಕು ಬಾರಿ ಮಹದೇವಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಂಗಳವಾರ ತಡರಾತ್ರಿ ಬಿಡುಗಡೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಆ ಕ್ಷೇತ್ರಕ್ಕೆ ಯಾರ ಹೆಸರನ್ನೂ ಪ್ರಕಟಿಸಿಲ್ಲ.

    ಮಹಾದೇವ ಪುರ ಕ್ಷೇತ್ರಕ್ಕೆ ಕಳೆದ ಎರಡು ದಶಕಗಳಿಂದ ಬೆಂಗಳೂರು ನಗರದಲ್ಲಿ ಆರ್ಥೋಪೆಡಿಕ್ ಸರ್ಜನ್ ಆಗಿರುವ ಡಾ.ನರೇಂದ್ರ ರಂಗಪ್ಪ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಡಾ. ನರೇಂದ್ರ ರಂಗಪ್ಪ ಪ್ರತಿಷ್ಠಿತ ಕುಟುಂಬದಿAದ ಬಂದವರು. ಅವರ ಮುತ್ತಜ್ಜ ದಿವಂಗತ ಮುನಿವೆಂಕಟಪ್ಪ ಅವರು ಮೈಸೂರು ಮಹಾರಾಜರ ಕಾಲದಲ್ಲಿ ಪ್ರಜಾ ಪ್ರತಿನಿಧಿ ಸಭೆ ಸದಸ್ಯರಾಗಿದ್ದರು. ಅವರ ಅಜ್ಜ ದಿವಂಗತ ಮುನಿಸ್ವಾಮಿ 60 ರ ದಶಕದ ಮಧ್ಯ ಭಾಗದಲ್ಲಿ ಎಂಎಲ್ಸಿ ಆಗಿದ್ದರು. ಅವರ ತಂದೆ ದಿವಂಗತ ರಂಗಪ್ಪ ಅವರು ಉಪ ಪೊಲೀಸ್ ಆಯುಕ್ತರಾಗಿ ನಿವೃತ್ತರಾಗಿದ್ದರು.

   ಮೂರು ಆಸ್ಪತ್ರೆಗಳಿಗೆ ಸಂದರ್ಶಕ ವೈದ್ಯರಾಗಿರುವ ಡಾ.ನರೇಂದ್ರ ರಂಗಪ್ಪ ಅವರು ತಮ್ಮದೇ ಆದ ಖಾಸಗಿ ಪ್ರಾಕ್ಟೀಸ್ ಹೊಂದಿದ್ದು, ಪ್ರಸ್ತುತ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಟಿವಿ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಅವರು ಪರಿಶಿಷ್ಟ ಜಾತಿ – ಭೋವಿ ಸಮುದಾಯಕ್ಕೆ ಸೇರಿದವರು.
ಮಹದೇವಪುರ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಡಾ.ನರೇಂದ್ರ ರಂಗಪ್ಪ ಅವರ ಹೆಸರನ್ನು ಇಂದು ಸಂಜೆ ಪರಿಗಣನೆ ಮತ್ತು ಚರ್ಚೆಗೆ ಬಿಜೆಪಿ ವರಿಷ್ಠರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap