ಪಾಕ್ ಮಾಜಿ ಪ್ರಧಾನಿಗೆ ಹೃದಯಾಘಾತ..!

ಲಾಹೋರ್​​:

    ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಹೃದಯಾಘಾತವಾಗಿರುವ ಘಟನೆ ವರದಿಯಾಗಿದೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.ಅವರ ಆರೋಗ್ಯ ಹದಗೆಟ್ಟಿರುವ ಕಾರಣ ನಿನ್ನೆ ಅವರಿಗೆ ಲಾಹೋರ್​ ಹೈಕೋರ್ಟ್​ ವೈದ್ಯಕೀಯ ಕಾರಣದ ಮೇಲೆ ಜಾಮೀನು ನೀಡಿತ್ತು, ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆ ಅವರಿಗೆ ಹೃದಯಾಘಾತವಾಗಿದೆ.

   ಮೊನ್ನೆಯಷ್ಟೇ ನವಾಜ್ ಷರೀಫ್ ಆರೋಗ್ಯ ದಿನದಿನಕ್ಕೂ ಹದಗೆಡುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರ ಮಗ ಹುಸೇನ್​ ಷರೀಫ್, ನಮ್ಮ ತಂದೆಗೆ ಜೈಲಿನಲ್ಲಿ ವಿಷ ಪ್ರಾಶನ ಮಾಡಿದ್ದಕ್ಕಾಗಿ ಅವರ ಆರೋಗ್ಯ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗಾಗಲೇ ಅವರ ರಕ್ತದ ಪ್ಲೇಟ್ಲೆಟ್ ಪ್ರಮಾಣ 16,000 ದಿಂದ 2,000ಕ್ಕೆ ಇಳಿಕೆಯಾಗಿವೆ ಎಂದು ತಿಳಿದು ಬಂದಿದೆ.

    ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್ ಲಂಚ ಪ್ರಕರಣದಲ್ಲಿ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ, ಹೀಗಾಗಿ ಅವರು ಜೈಲ್ಲಿನಲ್ಲಿದ್ದಾರೆ. ಈ ಹಿಂದೆ ಕೂಡ ಅವರಿಗೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link