ಬೀಜಿಂಗ್: 

ಪಾಕಿಸ್ತಾನ ಎಂದರೆ ಈ ಮೊದಲು ಮುಸ್ಲಿಂ ರಾಷ್ಟ್ರ ಅಥವಾ ಭಯೋತ್ಪಾದಕ ರಾಷ್ಟ್ರ ಎಂಬ ಅಪಕೀರ್ತಿ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದು ಆರ್ಥಿಕವಾಗಿ ಹಿಂದುಳಿದೆ ಮತ್ತು ವಿಶ್ವ ಮಟ್ಟದಲ್ಲಿ ಏಕಾಂಗಿಯಾಗುದಲ್ಲದೆ ಕಡೆಗಣಿಸಲ್ಪಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಆರ್ಥಿಕ ಸಹಾಯಕ್ಕಾಗಿ ಎದುರು ನೋಡುತ್ತಿರುವ ಪಾಕಿಸ್ತಾನಕ್ಕೆ ತನ್ನ ಪರಮಾಪ್ತ ಮಿತ್ರ ಚೀನಾದ ಎದಿರು ಕೈಯೊಡ್ಡಿ ನಿಂತಿದೆ ಆದ ಕಾರಣ ಚೀನಾ ತನ್ನ ಮಿತ್ರನ ಕಷ್ಟ ನೋಡಲಾರದೆ ಆರ್ಥಿಕ ನೆರವು ನೀಡಲು ಮುಂದಾಗಿದೆ .
ಪಾಕಿಸ್ತಾನದ ವಿದೇಶಿ ವಿನಿಮಯ ಅದಃ ಪಾತಾಲಕ್ಕೆ ಕುಸಿದಿದ್ದು, ತೀವ್ರವಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರಾಷ್ಟ್ರಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಆದರೆ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಚೀನಾ ಪ್ರತಿಕ್ರಿಯೆ ನೀಡಿದ್ದು ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಬೇಕೆಂದರೆ ಒಂದಷ್ಟು ಸುತ್ತಿನ ಮಾತುಕತೆ ಅಗತ್ಯವೆಂದು ಹೇಳಿದೆ ಎಂದು ವರದಿಯಾಗಿದೆ.
ಇಂತಹ ಆರ್ಥಿಕ ಮುಗ್ಗಟಿನ ಪರಿಸ್ಥಿತಿಯಲ್ಲೂ ಪಾಕಿಸ್ತಾನ ತನ್ನ ಕುಯುಕ್ತಿಯನ್ನು ಬಿಟ್ಟು ಬಾಳುತ್ತಿಲ್ಲ ಒಂದು ಕಡೆ ಆರ್ಥಿಕ ಹಿಂಜರಿತವಾದರೆ ಇನ್ನೊಂದು ಕಡೆ ಉಗ್ರವಾದವನ್ನು ಪೋಷಿಸುವ ಹುನ್ನಾರದಲ್ಲಿದೆ ಕಾಶ್ಮೀರದ ಕಣಿವೆಯಲ್ಲಿ ಕಳೆದೊಂದು ತಿಂಗಳಿನಿಂದ ಆಗುತ್ತಿರುವ ಎನ್ಕೌಂಟರ್ ಗಲೆ ಇದಕ್ಕೆ ಸಾಕ್ಷಿಯಾಗಿವೆ ಇನ್ನಾದರು ಪಾಕಿಸ್ತಾನ ಒಳ್ಳೆಯ ಮನಸ್ತತ್ವವನ್ನು ಇಟ್ಟುಕೊಂಡರೆ ಒಳಿತು ಎಂಬುದು ಜಗತ್ತಿನ ಆಶಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
