ಇಸ್ಲಾಮಾಬಾದ್
ಆರ್ಟಿಕಲ್ 370 ರದ್ದುಗೊಳಿಸಿರುವ ಕೇಂದ್ರದ ಕ್ರಮವನ್ನು ಜಾಗತಿಕವಾಗಿ ಪ್ರಶ್ನಿಸಿದ್ದ ಪಾಕಿಸ್ತಾನ ತೀವ್ರ ಮುಖಭಂಗವಾದ ಬಳಿಕ ನಾವು ಕಾಶ್ಮೀರಿಗಳ ಆಶಯದ ುಳಿವಿಗಾಗಿ ಏನು ಬೇಕಾದರು ಮಾಡಲು ನಾವು ಸಿದ್ದರಿದ್ದೇವೆ ಎಂದಿತ್ತು ಅದರ ಮುಂದುವರೆದ ಭಾಗವಾಗಿ ಪಿಒಕೆಯಲ್ಲಿ ಇಮ್ರಾನ್ ಖಾನ್ ಮೆರವಣಿಗೆಗೆ ಮುಂದಾಗಿದ್ದಾರೆ.
ಕಣಿವೆ ರಾಜ್ಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಆರ್ಟಿಕಲ್ 370ನ್ನು ತೆಗೆದು ಹಾಕಿರುವ ಭಾರತ ಸರ್ಕಾರದ ವಿರುದ್ಧ ಅಂತರಾಷ್ಟ್ರೀಯ ಗಮನ ಸೆಳೆಯುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಈಗ ಹೊಸ ಸಾಹಸ ಮಾಡುತ್ತಿದೆ.ಈಗಾಗಲೇ ಜಮ್ಮು ಕಾಶ್ಮೀರದ ವಿಚಾರ ಕುರಿತಾಗಿ ಇಮ್ರಾನ್ ಖಾನ್ ಗರಂ ಆಗಿದ್ದು, ಪಾಕಿಸ್ತಾನದ ಏರೋಸ್ಪೇಸ್‌ನಲ್ಲಿ ಭಾರತದ ವಿಮಾನಗಳು ಹಾರಾಡದಂತೆ ನಿರ್ಬಂಧ ವಿಧಿಸಿದ್ದಾರೆ.ಮತ್ತು ರಾಜತಾಂತ್ರಿಕವಾಗಿ ವಿದೇಶ ಪ್ರಯಾಣ ಬೆಳೆಸುವ ಭಾರತದ ಗಣ್ಯರ ವಿಮಾನಗಳಿಗೂ ನಿಷೇಧ ಹೇರುವ ಮೂಲಕ ತನ್ನ ಕೋಪವನ್ನು ತೋರ್ಪಡಿಸಿತ್ತು.
ಸದ್ಯ ಇಮ್ರಾನ್ ಖಾನ್ ಹೊಸ ತಂತ್ರ ಪ್ರಯೋಗಿಸಲು ಮುಂದಾಗಿದ್ದಾರೆ ಅದೇ ಪಿಓಕೆಯಲ್ಲಿ ಮೆರವಣಿಗೆ ಮೂಲಕ ಜನರನ್ನು ಆದೇಶದ ವಿರುದ್ದ ಎತ್ತಿ ಕಟ್ಟುವುದು ಮತ್ತು ಭಾರತದ ಆಂತರಿಕ ಬಲವನ್ನು ಮೆರವಣಿಗೆ ಮೂಲಕ ಕುಗ್ಗಿಸುವುದು ಎಂಬ ನಿರ್ಧಾರಕ್ಕೆ ಬಂದಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
