ಲಾಹೋರ್:

ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ಪ್ರಯಾಣಿಕರಿಗೆ ಇಷ್ಟು ದಿನ ಇದ್ದ ಒಂದೇಒಂದು ಸಂಪರ್ಕ ಕೊಂಡಿ ಎಂದರೆ ಅದು ಸಂಜೋತಾ ಎಕ್ಸ್ ಪ್ರೆಸ್ ಆದರೆ ಪಾಕ್ ತನ್ನ ಉದ್ದಟತನದಿಂದ ಈಗ ಭಾರತದೊಂದಿಗೆ ಇದ್ದ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದೆ ಏಕೆಂದರೆ ನಿನ್ನೆ ಪಾಕ್ ಗೆ ತೆರಳಿದ ಸಂಜೋತಾ ರೈಲು ಮತ್ತೆ ಪ್ರಯಾಣ ಬೆಳೆಸುವುದೇ ಅನುಮಾನವಾಗಿದೆ.
ಇಂದು ಬೆಳಗ್ಗೆ 8ಗಂಟೆಗೆ ಸಂಜೋತಾ ಎಕ್ಸ್ ಪ್ರೆಸ್ ಲಾಹೋರ್ ರೈಲ್ವೆ ನಿಲ್ದಾಣದಿಂದ ಹೊರಡಬೇಕಿತ್ತು, ಆದರೆ ಗಡಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವುದರಿಂದ ಸಂಜೋತಾ ಎಕ್ಸ್ ಪ್ರೆಸ್ ಸಂಚಾರವನ್ನು ಮುಂಜಾಗ್ರತಾ ಕ್ರಮವಾಗಿ ರದ್ಧುಗೊಳಿಸಿದ್ದಾಗಿ ರೈಲ್ವೆ ಮ್ಯಾನೇಜರ್ ಜುಬೈರ್ ಶಫಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
