ಏಕಾಏಕಿ ಮಣ್ಣು ಕುಸಿದು 15 ಮಂದಿ ದಾರುಣ ಸಾವು…!!!

ಪೆರು :

      ನಿತ್ಯ ಹರಿದ್ವರ್ಣ ಅಮೆಜಾನ್ ಕಾಡುಗಳಿಂದ ಕಂಗೊಳಿಸುವ ದಕ್ಷಿಣ ಅಮೆರಿಕಾದಲ್ಲಿ ಮದುವೆ ಸಂಭ್ರಮದಲ್ಲಿದ ಮನೆಯೊಂದು ಇಂದು ಮಸಣವಾಗಿದೆ . 

        ಇಲ್ಲಿನ ಅಲಂಬ್ರಾ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ನೃತ್ಯ ಮಾಡುತ್ತಿದ್ದವರ ಮೇಲೆ ಇದ್ದಕ್ಕಿದಂತೆ ಕುಸಿದ ಮಣ್ಣು 15 ಜನರ ಜೀವ ತೆಗೆದಿದೆ . 

          ಈ ಸಮಾರಂಭದಲ್ಲಿ 100ಕ್ಕೂ ಅಧಿಕ  ಮಂದಿ ಅತಿಥಿಗಳು ಪಾಲ್ಗೊಂಡಿದ್ದು ಇದರಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮೇಯರ್ ಮಾಹಿತಿ ನೀಡಿದ್ದಾರೆ. ಏಕಾಏಕಿ ಮಣ್ಣು ಕುಸಿದು, ಹೋಟೆಲ್ ಛಾವಣಿ ಕುಸಿದು ಬಿದ್ದಿದೆ. ಇದರಿಂದ ಹೆಚ್ಚಿನ ಸಾವು ನೋವಾಗಿದೆ ಎಂದು ತಿಳಿದು ಬಂದಿದೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link