ಕೊರೊನಾಗೆ ಬಲಿಯಾದ ಫುಟ್ ಬಾಲ್ ಕೋಚ್…!

ಸ್ಪೇನ್ :

     ಜಾಗತಿಕವಾಗಿ ಮರಣ ಪ್ರವಾಹವನ್ನು ಉಂಟುಮಾಡಿರುವ ಕೊರೋನಾ ವೈರಸ್ ಗೆ ಸ್ಪೇನ್ ದೇಶ ಕೂಡ ತತ್ತರಿಸಿ ಹೋಗಿದ್ದು, ಸ್ಪೇನ್ ಫುಟ್ಬಾಲ್ ತಂಡದ ಕೋಚ್ ಕೂಡ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

     ಹೌದು.. ಸ್ಪೇನ್‌ ದೇಶದ ಫುಟ್‌ಬಾಲ್ ತಂಡದ ತರಬೇತುದಾರ ಕೇವಲ 21 ವರ್ಷ ವಯಸ್ಸಿನ ಫ್ರಾನ್ಸಿಸ್ಕೊ ಗಾರ್ಸಿಯಾ ಅವರು ಕೋವಿಡ್‌–19 ಅಥವಾ ಕೊರೋನಾ ವೈರಸ್ ನಿಂದಾಗಿ ಮೃತಪಟ್ಟಿದ್ದಾರೆ. ಅಥ್ಲೆಟಿಕೊ ಪೋರ್ಟಾಡಾ ಆಲ್ಟಾ ಯುವ ತಂಡದ ವ್ಯವಸ್ಥಾಪಕರಾಗಿ 2016ರಿಂದ ಕಾರ್ಯ ನಿರ್ವಹಿಸಿದ್ದ ಅವರು, ಇಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ ಅತಿ ಕಿರಿಯ ವ್ಯಕ್ತಿ ಎಂದು ಗೋಲ್‌.ಕಾಮ್‌ ವರದಿ ಮಾಡಿದೆ.

    ಈ ಸಂಬಂಧ ಅಥ್ಲೆಟಿಕೊ ಪೋರ್ಟಾಡಾ ಆಲ್ಟಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ, ‘ನಮ್ಮನ್ನು ಅಗಲಿರುವ ಕೋಚ್‌ ಫ್ರಾನ್ಸಿಸ್ಕೊ ಗಾರ್ಸಿಯಾ ಅವರ ಕುಟುಂಬ, ಸ್ನೇಹಿತರ ಪರವಾಗಿ ತೀವ್ರ ಸಂತಾಪ ಸೂಚಿಸುತ್ತೇವೆ. ಇದು ದುರದೃಷ್ಟಕರ. ಈಗ ನೀವಿಲ್ಲದೆ ನಾವು ಏನು ಮಾಡಲು ಸಾಧ್ಯ ಫ್ರಾನ್ಸಿಸ್? ಪೋರ್ಟಾಡಾ ಇರಲಿ ಮತ್ತೊಂದು ತಂಡವೇ ಇರಲಿ, ನೀವು ಯಾವಾಗಲೂ ನಮ್ಮೊಂದಿಗೆ ಇರುತ್ತಿದ್ದಿರಿ. ನಿಮ್ಮ ನೆರವಿಲ್ಲದೆ ಲೀಗ್‌ನ ಅಷ್ಟು ದೂರವನ್ನು ನಾವು ಹೇಗೆ ಕ್ರಮಿಸಲು ಸಾಧ್ಯ? ನಮಗೆ ಏನೊಂದೂ ತೋಚುತ್ತಿಲ್ಲ. ಆದರೆ, ಖಂಡಿತಾ ನಿಮಗಾಗಿ ಅದನ್ನು ಸಾಧಿಸುತ್ತೇವೆ. ನಾವು ನಿಮ್ಮನ್ನು ಮರೆಯುವುದಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
     ಇನ್ನು ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಸುಮಾರು 1.7 ಲಕ್ಷ ಜನರಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ 7,174 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, 127 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.  ಇಟಲಿಯಲ್ಲಿ ಸೋಮವಾರ ಒಂದೇ ದಿನ 3,233 ಹೊಸ ಪ್ರಕರಣ ದಾಖಲಾಗಿವೆ. 349 ಜನರು ಮೃತಪಟ್ಟಿದ್ದಾರೆ. 28,000 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಚೀನಾದಲ್ಲಿ 3,213 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಚೀನಾ ದೇಶದ ರೀತಿಯಲ್ಲೇ ಇಟಲಿಯಲ್ಲೂ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 
    ಇರಾನ್​ನಲ್ಲೇ ಸೋಮವಾರ ಒಂದೇ ದಿನ 129 ಜನರು ಸಾವನ್ನಪ್ಪಿದ್ದಾರೆ. ಇರಾನ್​ನಲ್ಲಿ ಒಂದೇದಿನ ದಾಖಲಾದ ಅತ್ಯಂತ ಹೆಚ್ಚಿನ ಸಾವಿನ ಸಂಖ್ಯೆ ಇದಾಗಿದೆ. ಇರಾನ್​ನಲ್ಲಿ 850ಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link