ಇಸ್ರೇಲ್ :
ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಬಾರಿ ಪ್ಯಾಲೆಸ್ತೀನ್ ನಾಗರಿಕರಿಗೆ ಇಸ್ರೇಲ್ ಸೂಚನೆ ಒಂದನ್ನು ನೀಡಿದೆ. ಹಾಗಾದರೆ ಇಸ್ರೇಲ್ ನೀಡಿರುವ ಆ ಸೂಚನೆ ಏನು? ಸಂಚಲನ ಸೃಷ್ಟಿ ಆಗಲು ಕಾರಣ ಏನು? ಯುದ್ಧ ನಿಲ್ಲುತ್ತಾ? ಬನ್ನಿ ತಿಳಿಯೋಣ.
ಪ್ಯಾಲೆಸ್ತೇನ್ ನಗರ ಗಾಜಾಪಟ್ಟಿ ಭೀಕರ ಯುದ್ಧದ ಪರಿಣಾಮ ಪರದಾಡಿ ಹೋಗಿದ್ದು, ಜೀವ ಉಳಿಸಿಕೊಳ್ಳಲು ಜನರು ರಫಾ ಗಡಿಗೆ ಬಂದಿದ್ದರು. ಆದರೆ ಇಲ್ಲೂ ಈಗ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಇಲ್ಲಿಂದ ಪ್ಯಾಲೆಸ್ತೀನ್ ಜನರನ್ನು ಸ್ಥಳಾಂತರ ಮಾಡಲು ಇಸ್ರೇಲ್ ಮಿಲಿಟರಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೂರ್ವ ರಫಾ ಭಾಗದಲ್ಲಿ ಈಗ ಆಶ್ರಯವನ್ನು ಪಡೆದಿರುವ ಗಾಜಾಪಟ್ಟಿ ಮೂಲದ ನಾಗರಿಕರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕೆಂದು ಆದೇಶ ನೀಡಲಾಗಿದೆ. ಇದು ರಫಾ ಗಡಿಯಲ್ಲಿ ಪರದಾಡುತ್ತಿರುವ ಜನರಿಗೆ ಮತ್ತಷ್ಟು ಭಯ ಹುಟ್ಟಿಸುತ್ತಿದೆ.
ರಷ್ಯಾ & ಉಕ್ರೇನ್ ಯುದ್ಧದ ರೀತಿಯೇ ಆರಂಭ ಆಗಿರುವ ಹಮಾಸ್ & ಇಸ್ರೇಲ್ ಯುದ್ಧವು ಭಾರಿ ಆಘಾತ ಉಂಟುಮಾಡಿದೆ. ಯಾಕಂದ್ರೆ ಜಾಗತಿಕವಾಗಿ ಈ ಯುದ್ಧ ಭಯ ಹುಟ್ಟಿಸಿದೆ. ಅದ್ರಲ್ಲೂ ಒಂದೆಡೆ ಉಕ್ರೇನ್ ಮತ್ತು ರಷ್ಯಾ ಬಡಿದಾಡುತ್ತಿವೆ. ಇನ್ನೊಂದು ಕಡೆ ಹಮಾಸ್ & ಇಸ್ರೇಲ್ ಕೂಡ ಫೈಟಿಂಗ್ ಮಾಡುತ್ತಿವೆ. ಹೀಗಾಗಿ ಎಲ್ಲಿ ಮತ್ತೊಂದು ಮಹಾಯುದ್ಧ ಇದೀಗ ಶುರುವಾಗುತ್ತೋ? ಅನ್ನೋ ಭಯ ಆವರಿಸಿದೆ. ಇದೇ ಕಾರಣಕ್ಕೆ ಹಮಾಸ್ & ಇಸ್ರೇಲ್ ಯುದ್ಧ ಯಾವಾಗ ನಿಲ್ಲುತ್ತೆ? ಅನ್ನೋದೆ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ