ಅಹಮದಾಬಾದ್:
ಭಾರೀ ಮಳೆಯ ನಡುವೆ ಗುಜರಾತ್ನ ಸೌರಾಷ್ಟ್ರ ಪ್ರದೇಶದಲ್ಲಿ ದೇವಭೂಮಿ ದ್ವಾರಕಾ ಜಿಲ್ಲೆಯ ಜಮ್ ಖಂಭಾಲಿಯಾ ಪಟ್ಟಣದಲ್ಲಿ ಶಿಥಿಲಗೊಂಡ ಮೂರು ಅಂತಸ್ತಿನ ಕಟ್ಟಡ ಕುಸಿದು ವೃದ್ಧೆ ಮತ್ತು ಅವರ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪಟ್ಟಣದ ಗಗ್ವಾನಿ ಫಾಲಿ ಪ್ರದೇಶದಲ್ಲಿ ನಿನ್ನೆ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು, ಮಧ್ಯರಾತ್ರಿಯವರೆಗೆ ಮುಂದುವರಿದ ಸುಮಾರು ಆರು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಮೂವರ ಮೃತದೇಹಗಳನ್ನು ಹೊರತರಲಾಯಿತು. ಅವಶೇಷಗಳಡಿಯಿಂದ ಐವರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಭಾರೀ ಮಳೆಯ ಪರಿಣಾಮವಾಗಿ ಕಟ್ಟಡ ಕುಸಿದ ನಂತರ ಇವರ ಮೇಲೆ ಬಿದ್ದ ಅವಶೇಷಗಳನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕೇಶರ್ಬೆನ್ ಕಂಜಾರಿಯಾ (65ವ), ಪ್ರೀತಿಬೆನ್ ಕಂಜಾರಿಯಾ (15ವ) ಮತ್ತು ಪಾಯಲ್ಬೆನ್ ಕಂಜಾರಿಯಾ (18ವ) ಎಂದು ಗುರುತಿಸಲಾಗಿದೆ.
