ಬ್ಯೂನೋಸ್ ಐರಿಸ್:
ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಭದ್ರತೆ, ಶಕ್ತಿ ಮತ್ತು ಹೂಡಿಕೆಗಳಲ್ಲಿ ಎರಡು ದೇಶಗಳ ನಡುವೆ ಸಹಕಾರದ ವಿಷಯವಾಗಿ ಗಹನವಾದ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯುನೋಸ್ ಐರೆಸ್ ನ ರಾಜಕುಮಾರರ ನಿವಾಸದಲ್ಲಿ ಭೇಟಿಯಾದ ಇಬ್ಬರು ಮುಖಂಡರು, ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಇನ್ನೂ ಮುಂತಾದ ಎಲ್ಲಾ ಅಗತ್ಯ ಸರಕುಗಳನ್ನು ಪೂರೈಕೆ ವಿಚಾರವಾಗಿ ಮೋದಿಯವರೊಡನೆ ಸಲ್ಮಾನ್ ಚರ್ಚಿಸಿದ್ದಾರೆ. ಮತ್ತು ದ್ವೈಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ವರದಿಯಾಗದೆ.ಸಲ್ಮಾನ್ ಅವರು ಸೌರ ಶಕ್ತಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೇ ಆಗಿದ್ದೇ ಆದರೆ ನಮ್ಮ ದೇಶದ ನಿರುಧ್ಯೋಗಿಗಳಿಗೆ ಉದ್ಯೋಗ ಸಿಗುವುದಂತೂ ಖಚಿತ ಎಂದು ವಿಷ್ಲೇಶಕರು ಆಭಿಪ್ರಾಯ ಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
