ಇಸ್ಲಾಮಾಬಾದ್: 

ಪಾಕಿಸ್ಥಾನ ಆರ್ಥಿಕವಾಗಿ ಕುಗ್ಗಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುವ ಪ್ರಧಾನಿಗೆ ಒಂದೊಂದೆ ಉತ್ತರ ಸಿಗುತ್ತಾ ಹೋಗುತ್ತಿದೆ ಆದರೆ ಅವೆಲ್ಲಾ ಹಗರಣಗಳ ರೂಪದಲ್ಲಿ ಎಂಬುದೇ ಸೋಜಿಗದ ಸಂಗತಿ ಅಂತಹುದೇ ಒಂದು ಉತ್ತರ ವಸತಿ ಹಗರಣ ಪ್ರಕರಣ ಅದರ ಪ್ರಮುಖ ಆರೋಪಿ ಪಾಕಿಸ್ತನದ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ, ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್.
ಸುಮಾರು 1400 ಕೋಟಿ ರೂಪಾಯಿ ಮೌಲ್ಯದ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಭ್ರಷ್ಟಾಚರ ನಿಗ್ರಹ ವಿಭಾಗ ಶೆಹಬಾಜ್ ಷರೀಫ್ ಅವರನ್ನು ಬಂಧಿಸಿದೆ. ಈ ಬಗ್ಗೆ ನ್ಯಾಷನಲ್ ಅಕೌಂಟೆಬಲಿಟಿ ಬ್ಯೂರೋ(ಎನ್ಎಬಿ) ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಂಸತ್ ನಲ್ಲಿ ವಿಪಕ್ಷ ನಾಯಕನಾಗಿರುವ ಶೆಹಬಾಜ್ ಷರೀಫ್ ಅವರು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ಲಾಹೋರ್ ನಲ್ಲಿ ಅಶಿಯಾನಾ ವಸತಿ ಯೋಜನೆಯಲ್ಲಿ ಅಕ್ರಮಗಳನ್ನು ಎಸಗಿರುವ ಆರೋಪ ಕೇಳಿಬಂದಿದೆ. ಬಡವರಿಗೆ ವಸತಿ ಕಲ್ಪಿಸಲು ಉದ್ದೇಶಿಸಲಾಗಿದ್ದ ಯೋಜನೆಯನ್ನು ಸ್ವಲಾಭಕ್ಕಾಗಿ ಬಳಸಲಾಗಿತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ವಿಭಾಗ ತನಿಖೆ ಪ್ರಾರಂಭಿಸಿತ್ತು . ಪ್ರಕರಣದಲ್ಲಿ ಶೆಹಬಾಜ್ ಷರೀಫ್ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಅವರನ್ನು ಸೂಕ್ತ ಸಮಯ ನೋಡಿ ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ ಎಂದು ಎನ್ ಬಿ ಎ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
