ಸಿಂಗಾಪುರ್‌ ಓಪನ್‌ ಮೇಲೆ ಸಿಂಧು-ಸೈನಾ ಕಣ್ಣು

ಸಿಂಗಾಪುರ

        ಇಡಿಯನ್ ಚಾಲೆಂಜ್ ಟೂರ್ನಿಯಿಂದ ನಿರಾಸೆಯಿಂದ ಹೊರ ನಡೆದಿದ್ದ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ನಾಳೆಯಿಂದ ಆರಂಭವಾಗುವ ಸಿಂಗಾಪುರ ಓಪನ್ ಮೇಲೆ ಕಣ್ಣಿಟ್ಟಿದ್ದಾರೆ.

      ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಜಯಸಿದ್ದ ಸಿಂಧು, ಕಳೆದ ಹಲವು ವಾರಗಳಿಂದ ವೈಫಲ್ಯ ಅನುಭವಿಸಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸುತ್ತಿನಲ್ಲಿ ಕೊರಿಯಾದ ಸುಂಗ್ ಜಿ ಹ್ಯೂನ್ ವಿರುದ್ಧ ಸೋಲು ಅನುಭವಿಸಿದ್ದರು. ನಂತರ ಇಂಡಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಅವರು, ಚೀನಾದ ಹೀ ಬಿಂಗ್ಜಿಯೊ ವಿರುದ್ಧ ಸೋಲು ಅನುಭವಿಸಿದ್ದರು.

      ಬಿಡಬ್ಲ್ಯುಎಫ್ ಬಿಡುವಿಲ್ಲದ ವೇಳಾಪಟ್ಟಿಯಿಂದ ಧಣಿದಿರುವ 4ನೇ ಶ್ರೇಯಾಂಕದ ಪಿ.ವಿ ಸಿಂಧು ಅವರು, ಸಿಂಗಾಪುರ ಓಪನ್ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಲ್ಯಾನ್ನಿ ಅಲೆಗ್ಸಾಂಡರ್ ಮೈನಕಿ ಅವರ ವಿರುದ್ಧ ಸೆಣಸಲಿದ್ದಾರೆ.

      ಭಾರತದ ಮತ್ತೊರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕರೋಲಿನ್ ಮರಿನ್ ಗಾಯಗೊಂಡಿದ್ದರಿಂದ ಅವರು ಫೈನಲ್ ಪಂದ್ಯವನ್ನು ಆಡದೆ ಸೈನಾಗೆ ಪ್ರಶಸ್ತಿ ಬಿಟ್ಟುಕೊಟ್ಟಿದ್ದರು.ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್‌ನಲ್ಲಿ ಸೈನಾ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದರು. ಬಳಿಕ, ಗ್ರಂಥಿ ಸೊಂಕಿನಿಂದಾಗಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಅವರು, ಸ್ವಿಸ್ ಓಪನ್ ಹಾಗೂ ಇಂಡಿಯನ್ ಓಪನ್‌ನಲ್ಲಿ ಭಾಗವಹಿಸಿರಲಿಲ್ಲ ಚೇತರಿಸಿಕೊಂಡ ಬಳಿಕ ಮಲೇಷ್ಯಾ ಓಪನ್‌ಗೆ ಮರಳಿದ್ದ ಸೈನಾ, ಮೊದಲ ಸುತ್ತಿನಲ್ಲೇ ಥಾಯ್ಲೆಂಡ್‌ನ ಪೊರ್ನ್ ಪಾವೆ ಚೊಚುವಾಂಗ್ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಸಿಂಗಾಪುರ್ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಹೊಜ್ಮಾರ್ಕ್ ಅವರ ವಿರುದ್ಧ ಸೆಣಸಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link