ಶ್ರೀಲಂಕಾ ಸ್ಪೋಟ ಪ್ರಕರಣ:7 ಮಂದಿ ದಾಳಿಕೋರರ ಬಂಧನ

ಕೊಲಂಬೋ

     ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ಆತ್ಮಾಹುತಿ ದಾಳಿಯಲ್ಲಿ  ಭಾಗಿಯಾಗಿದ್ದ  7 ಉಗ್ರರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಹಿರಿಯ ಪೊಲೀಸ್  ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ.

     ಆರೋಪಿಗಳನ್ನು ರಾಷ್ಟ್ರೀಯ ತಾವ್ಹೀದ್  ಜಮಾತ್ (ಎನ್ ಟಿಜೆ) ಸಂಘಟನೆಯ ಸದಸ್ಯರು ಎಂದು ಗುರುತಿಸಲಾಗಿದ್ದು, ಇವರನ್ನು ಸೋಮವಾರ  ಇಲ್ಲಿನ ಹ್ಯಾಂಬನ್ ಟೋಟ ಪ್ರದೇಶದಲ್ಲಿ ಬಂಧಿಸಲಾಗಿದೆ. ಇವರೆಲ್ಲರೂ ಈಸ್ಟರ್ ಭಾನುವಾರದ  ದಾಳಿಯ ಮಾಸ್ಟರ್ ಮೈಂಡ್ ಸಹರನ್ ಹಸೀಮ್ ನ ಆಪ್ತರಾಗಿದ್ದರು ಎಂದು ತಿಳಿದು ಬಂದಿದೆ.

      ಇವರು ಹಸೀಮ್ ಸಹೋದರನ ಮೂಲಕ ಹ್ಯಾಂಬನ್ ಟೋಟ ತಲುಪಿದ್ದು, ಇಲ್ಲಿ ದೀರ್ಘಕಾಲದಿಂದ ಗೌಪ್ಯವಾಗಿ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ.ಇಲ್ಲಿನ  ಬಟ್ಟಿಕಾಲೋವದಲ್ಲಿನ ಜಿಯೋನ್ ಚರ್ಚ್ ಒಳಗೆ ತನ್ನನ್ನು ಸ್ಫೋಟಿಸಿಕೊಂಡ ಮೊಹಮ್ಮದ್ ನಜರ್  ಮೊಹಮ್ಮದ್ ಅಸತ್ ಎಂಬಾತ ಇವರಿಗೆ ತರಬೇತಿ ನೀಡುತ್ತಿದ್ದನು ಎಂದು ಶ್ರೀಲಂಕಾದ  ಮಾಧ್ಯಮವೊಂದು ವರದಿ ಮಾಡಿದೆ.

      ಭಾನುವಾರ ಕಟ್ಟಂಕುಡಿ ಪೊಲೀಸರು, ವಿಶೇಷ ಕಾರ್ಯಪಡೆಯ  ನೆರವಿನಿಂದ ಎನ್ ಟಿಜಿ ಉಗ್ರರು ಬಳಸುತ್ತಿದ್ದರು ಎನ್ನಲಾದ ಕಟ್ಟಡದ ಮೇಲೆ ದಾಳಿ  ನಡೆಸಿದ್ದರು. ಈ ಕೇಂದ್ರವನ್ನು ಬಾಂಬ್ ಗಳ ತಯಾರಿಕೆ, ಪ್ರಯೋಗ, ಗುರಿ ತರಬೇತಿ ಹಾಗೂ ಇತರ  ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

     ಈ ಉಗ್ರರು ಮೂರು ಪೈಪ್ ಗಳ ನೆರವಿನಿಂದ  ತಯಾರಿಸಲಾಗುತ್ತಿದ್ದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ನಡೆಸಿದ ಹಠಾತ್  ದಾಳಿಯಲ್ಲಿ ಮೈಕ್ರೋ ಪಿಸ್ತೂಲ್, ಒಂದು ಖಡ್ಗ, ಎರಡು ನೋಕಿಯಾ ವಾಕಿ-ಟಾಕಿಗಳು, ಚಾರ್ಜರ್  ಗಳು ಸೇರಿ ಮತ್ತಿತರರ ವಸ್ತುಗಳು ಪತ್ತೆಯಾಗಿವೆ.

     ಆರೋಪಿಗಳ ವಿಚಾರಣೆ ನಡೆಸಿ ಎನ್  ಟಿಜೆ ಸಂಘದ ಚಟುವಟಿಕೆಗಳು, ಈಸ್ಟರ್ ಭಾನುವಾರದ ದಾಳಿಯಲ್ಲಿ ಅವರ ಕೈವಾಡದ ಕುರಿತು  ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.ಈಸ್ಟರ್ ಭಾನುವಾರಂದು ಹಲವೆಡೆ ನಡೆದ ಆತ್ಮಾಹುತಿ ದಾಳಿಯಲ್ಲಿ 257 ಜನರು ಮೃತಪಟ್ಟಿದ್ದರು. ಈ ಸಂಬಂಧ 70 ಜನರನ್ನು ಬಂಧಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap