ಲಂಡನ್:
ಕೊರೋನಾ ಸೋಂಕಿಗೆ ಲಸಿಕೆಯನ್ನು ಪರಿಚಯಿಸಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಮುಂದಾಗಿದ್ದಾರೆ ಮತ್ತು ನಾಳೆಯಿಂದಲ್ಲೇ ಮನುಷ್ಯರ ಮೇಲೆ ಪ್ರಯೋಗ ಆರಂಭಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ.
ವಿಶೇಷ ಅಧ್ಯಯನಗಳಿಗೆ ಹೆಸರುವಾಸಿಯಾಗಿರುವ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಅತ್ಯಂತ ವೇಗದ ಲಸಿಕೆಯನ್ನು ಕಂಡುಹಿಡಿದು ಅಭಿವೃದ್ಧಿಪಡಿಸುತ್ತಿದ್ದು ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ ಎಂದು ಹೇಳಿದ್ದರು. ಅಲ್ಲಿನ ಪ್ರಮುಖ ಸಂಶೋಧಕ ಪ್ರೊ.ಸಾರಾ ಗಿಲ್ಬರ್ಟ್, ಸಾರ್ಸ್-ಕೊ-2 ಎಂದು ಕರೆಯಲ್ಪಡುವ ಚಡೊಕ್ಸ್1 ಲಸಿಕೆ ಕೊರೋನಾ ಸೋಂಕಿಗೆ ಸಹಾಯವಾಗಬಹುದು ಎಂದಿದ್ದರು.
ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ಮಟ್ಟ್ ಹೊಂಕೊಕ್, ವಿಶ್ವವಿದ್ಯಾಲಯದ ಸಂಶೋಧನಾ ತಂಡಕ್ಕೆ ಲಸಿಕೆ ಪ್ರಯೋಗಕ್ಕೆ 20 ಮಿಲಿಯನ್ ಪೌಂಡ್ ನೀಡಲಿದ್ದು ಲಂಡನ್ ನ ಇಂಪರಿಯಲ್ ಕಾಲೇಜು ಸಂಶೋಧಕರಿಗೆ ಹೆಚ್ಚುವರಿ 22.5 ಮಿಲಿಯನ್ ಪೌಂಡ್ ನೀಡಲಿದೆ ಎಂದು ಹೇಳಿದ್ದಾರೆ ಎಂದು ದ ಇಂಡಿಪೆಂಡೆಂಟ್ ವರದಿ ಮಾಡಿದೆ. ತಂಡವು ಆ ಪ್ರಯೋಗಗಳ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ ಹೀಗಾಗಿ ಆಕ್ಸ್ ಫರ್ಡ್ ಯೋಜನೆಯ ಲಸಿಕೆಯನ್ನು ಈ ಗುರುವಾರದಿಂದ ಜನರ ಮೇಲೆ ಪ್ರಯೋಗಿಸಲಾಗುವುದು ಎಂದು ಹೊಂಕೊಕ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ